ಚಾಮರಾಜನಗರ: ಹೋರಾಟ, ಚಳುವಳಿ ಹಾಗೂ ಕನ್ನಡ ಅಸ್ಮಿತೆ ವಿಚಾರ ಬಂದಾಗೆಲೆಲ್ಲಾ ಮೊದಲು ಧ್ವನಿ ಎತ್ತುವ ಗಡಿ ಜಿಲ್ಲೆಯಲ್ಲೇ ಕನ್ನಡದ ಬಾವುಟವನ್ನು ಎಸೆದಿರುವ ಘಟನೆ ನಡೆದಿದೆ.
ಪೊಲೀಸ್ ಚೌಕಿ ಮುಂಭಾಗ ಕಾಫಿ ಕಪ್, ವಾಟರ್ ಬಾಟೆಲ್ ಎಸೆದಿದ್ದ ಸ್ಥಳದಲ್ಲಿ ಕನ್ನಡ ಬಾವುಟಗಳು, ಬಂಟಿಂಗ್ಗಳನ್ನು ಎಸೆದಿದ್ದರು. ಇದನ್ನು ಕಂಡ ಕನ್ನಡಪರ ಹೋರಾಟಗಾರರಾದ ಚಾ.ರಂ. ಶ್ರೀನಿವಾಸೌಡ, ಪರಶಿವ ಮುಂತಾದವರು ಬಾವುಟಗಳನ್ನು ಪೊಲೀಸ್ ಚೌಕಿ ಒಳಗೆ ಇರಿಸಿದ್ದಾರೆ.
ಕಸದಂತೆ ಬಿದ್ದಿತ್ತು ಕನ್ನಡ ಬಾವುಟಗಳು...ಹೋರಾಟಗಾರರ ಆಕ್ರೋಶ ಇದನ್ನು ಓದಿ:ಚಂಡೀಗಢದಲ್ಲಿ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಹಾಕಿ: ಕೈಗಾದಲ್ಲಿ ತರಬೇತಿ ಪಡೆದು ಸಜ್ಜಾದ 5 ತಂಡ
ಈ ಬಾವುಟಗಳು ಕಸಾಪ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬಳಸಿದ ಬಾವುಟಗಳು ಎನ್ನಲಾಗಿದೆ. ಸಾಹಿತ್ಯ ಸಮ್ಮೇಳನವನ್ನು ಹಬ್ಬದಂತೆ ಮಾಡಿ, ಬಳಿಕ ಬಾವುಟಗಳನ್ನು ಕಸದಂತೆ ಎಸೆದಿದ್ದಾರೆ. ಈ ನಿರ್ಲಕ್ಷ್ಯ ಸರಿಯಲ್ಲ, ಬಾವುಟಕ್ಕೆ ಅಗೌರವ ತೋರಿದವರಿಗೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದ್ದಾರೆ.