ಕರ್ನಾಟಕ

karnataka

ETV Bharat / state

ಊಟ, ತಿಂಡಿಗಾಗಿ ಜಗಳ: ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಗಂಡ - ಆರೋಪಿಯ ಬಂಧನ

ಸಣ್ಣಪುಟ್ಟ ಕಾರಣಗಳಿಗಾಗಿ ಕೋಪದ ಕೈಗೆ ಬುದ್ದಿ ಕೊಡುವ ಅನೇಕ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಚಾಮರಾಜನಗರ ಜಿಲ್ಲೆಯಲ್ಲೂ ಅಂಥದ್ದೊಂದು ಘಟನೆ ನಡೆದಿದೆ.

A husband who killed his wife
ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ

By

Published : Mar 20, 2023, 10:39 AM IST

ಚಾಮರಾಜನಗರ:ಕ್ಷುಲ್ಲಕ ವಿಚಾರಕ್ಕೆ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಕೊತ್ತಲವಾಡಿ ಗ್ರಾಮದ ಕೆ.ಎನ್‌.ರತ್ನಮ್ಮ(30) ಮೃತರು. ಮಹೇಶ್ (41) ಕೊಲೆ ಆರೋಪಿ. ತಾನು ಕೃತ್ಯ ಎಸಗಿರುವುದಾಗಿ ಆರೋಪಿ ಗ್ರಾಮಸ್ಥರ ಮುಂದೆ ಹೇಳಿಕೊಂಡಿದ್ದಾನೆ.

ಕಾರಣ:ಪತ್ನಿ ಊಟ, ತಿಂಡಿ ಸರಿಯಾಗಿ ಮಾಡುತ್ತಿರಲಿಲ್ಲ. ನನ್ನ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಇದಕ್ಕಾಗಿ ಪದೇ ಪದೇ ಜಗಳ ಆಗುತ್ತಿತ್ತು. ಭಾನುವಾರ ರಾತ್ರಿಯೂ ಊಟದ ವಿಚಾರಕ್ಕೆ ಜಗಳ ನಡೆದು ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ಜಿಂಕೆ ಬೇಟೆ ಪ್ರಕರಣ

ಜಿಂಕೆ ಬೇಟೆ, ಆರೋಪಿ ಸೆರೆ:ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಧಾಮದಲ್ಲಿ ಜಿಂಕೆ ಬೇಟೆಯಾಡಿದ್ದ ಜಲ್ಲಿಪಾಳ್ಯದ ಮಾರುಶೆಟ್ಟಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹೂಗ್ಯಂ ವನ್ಯಜೀವಿ ವಲಯದ ಪಾಲಾರ್ ಹಳ್ಳದಲ್ಲಿ ಜಿಂಕೆ ಬೇಟೆಯಾಡಿದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು ಆರೋಪಿ ಸಿಕ್ಕಿಬಿದ್ದಿದ್ದಾನೆ. ಈತನ ಜೊತೆಗಾರರಾದ ಮೂರ್ತಿ, ರಾಮು ಪರಾರಿಯಾಗಿದ್ದಾರೆ. ಬಂಧಿತನಿಂದ 8 ಕೆಜಿ ಜಿಂಕೆ ಮಾಂಸ, ಒಂದು ಕೊಂಬು, ಉರುಳು ಹಾಗೂ ಜಿಂಕೆಯನ್ನು ಬೇಟೆಯಾಡಲು ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೂಜಾಟ- ದೂರು:ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ಘಟನೆ ಕೊಳ್ಳೇಗಾಲ ತಾಲೂಕಿನ ಚೆಲುವನಹಳ್ಳಿ ಗ್ರಾಮದ ಕಾಲುವೆ ಬಳಿ ನಡೆದಿದೆ. ಚೆಲುವನಹಳ್ಳಿ ಕಾಲುವೆ ಸಮೀಪ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಎಂಟು ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ದಾಳಿಯಲ್ಲಿ 23,620 ರೂ. ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳಿಗೆ ಜಾಮೀನು ಸಿಕ್ಕಿದೆ.

ದಂಪತಿ ಕಲಹ ಕೊಲೆಯಲ್ಲಿ ಅಂತ್ಯ: ದಂಪತಿ ನಡುವಿನ ಕಲಹ ಕೊಲೆಯಲ್ಲಿ ಅಂತ್ಯವಾದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ವರದಾಪುರ ಗ್ರಾಮದಲ್ಲಿ ಫೆ.19ರಂದು ನಡೆದಿದೆ. ಲಕ್ಷ್ಮೀ (33) ಕೊಲೆಯಾದ ಮಹಿಳೆ. ಗಂಡ ಭಂಗಿ ಮಲ್ಲಪ್ಪ (40) ಕೊಲೆ ಆರೋಪಿ. ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದ ಜಗಳ ವಿಕೋಪಕ್ಕೆ ತಿರುಗಿತ್ತು. ಕೋಪದಲ್ಲಿ ಪತಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದ. ಆರೋಪಿಯನ್ನು ಮರಿಯಮ್ಮನಹಳ್ಳಿ ಪೊಲೀಸರು ಬಂಧಿಸಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ.

ಸರ್ಕಾರಿ ನೌಕರಿಗಾಗಿ ಹತ್ಯೆ:ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಲು ಪತಿಯನ್ನೇ ಪತ್ನಿ ಕೊಲೆಗೈದ ಘಟನೆ ತೆಲಂಗಾಣದ ಚುಂಚುಪಲ್ಲಿಯಲ್ಲಿ ಕಳೆದ ತಿಂಗಳ ಜನವರಿ 6ರಂದು ಬೆಳಕಿಗೆ ಬಂದಿತ್ತು. ಮೃತರನ್ನು ಚುಂಚುಪಲ್ಲಿ ಜಿಲ್ಲೆಯ ಗಾಂಧಿ ಕಾಲೋನಿ ನಿವಾಸಿ ಕೊಮ್ಮಾರಬೋನ ಶ್ರೀನಿವಾಸ್ (50) ಎಂದು ಗುರುತಿಸಲಾಗಿತ್ತು.

ಇದನ್ನೂ ಓದಿ:ಪ್ರತ್ಯೇಕ ವಂಚನೆ ಪ್ರಕರಣ: ದೆಹಲಿ, ಕಾಶ್ಮೀರ ಮೂಲದ ಆರೋಪಿಗಳು ಸೆರೆ

ABOUT THE AUTHOR

...view details