ಚಾಮರಾಜನಗರ: ಕೊಳ್ಳೇಗಾಲತಾಲ್ಲೂಕಿನ ಪಾಳ್ಯ ಗ್ರಾಮದ ದೊಡ್ಡ ಕೆರೆ ಏರಿ ಒಡೆದು ಸಮೀಪದ ಜಮೀನುಗಳು ಜಾಲಾವೃತವಾಗಿ ನೂರಾರು ಎಕರೆಯಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಬೆಳೆ ನೀರು ಪಾಲಾಗಿ ರೈತ ಚಿಂತೆಗೀಡಾಗಿದ್ದರೆ, ಜಮೀನಿಗೆ ಹರಿದು ಬಂದ ನೀರಿನಲ್ಲಿ ಮೀನು ಹಿಡಿದು ಗ್ರಾಮದ ಮಕ್ಕಳು ಸಂಭ್ರಮಿಸಿದ್ದಾರೆ.
ಕೆರೆ ಏರಿ ಒಡೆದು ಗದ್ದೆಗೆ ನುಗ್ಗಿದ ನೀರು, ಹಳ್ಳಿ ಹೈಕ್ಳ ಕೈಗೆ ಪುಕ್ಸಟ್ಟೆ ಸಿಕ್ಕವು ನೂರಾರು ಕೆ.ಜಿ. ಮೀನು - kollegala latest news
ಕೊಳ್ಳೆಗಾಲ ತಾಲೂಕಿನ ಪಾಳ್ಯ ಗ್ರಾಮದ ದೊಡ್ಡಕೆರೆ ಏರಿ ಒಡೆದು ಪಕ್ಕದಲ್ಲಿದ್ದ ನೂರಾರು ಎಕರೆ ಕೃಷಿ ಜಮೀನಿಗೆ ನೀರು ನುಗ್ಗಿದೆ.
ಜಮೀನಿಗೆ ನುಗ್ಗಿದ ನೀರು
ನಿನ್ನೆ ತಡ ರಾತ್ರಿ 12ರ ವೇಳೆಯಲ್ಲಿ ಕೆರೆ ಏರಿ ಒಡೆದು ನೀರು ನುಗ್ಗಿದೆ. ವಿಷಯ ತಿಳಿದ ನಂತರ ಜಮೀನಿನ ರೈತರು ಸ್ಥಳಕ್ಕೆ ದೌಡಾಯಿಸಿ ಬೆಳೆ ನಾಶದ ಬಗ್ಗೆ ಚಿಂತಿಸುತ್ತ ಒಂದು ಕಡೆ ನಿಂತರೆ, ಮತ್ತೊಂದು ಕಡೆ ಮಕ್ಕಳು ಮತ್ತು ಯುವಕರ ಗುಂಪುಗಳು ಕೆರೆಯ ಮೂಲಕ ಜಮೀನಿಗೆ ಬಂದ ಮೀನುಗಳನ್ನು ಹಿಡಿಯುವಲ್ಲಿ ಬ್ಯುಸಿಯಾಗಿದ್ದರು.
ಬೆಳ್ಳಿಗೆ 6 ಗಂಟೆಯಿಂದಲೇ ಮೀನು ಹಿಡಿಯುವ ಸಂಭ್ರಮ ಪ್ರಾರಂಭಿಸಿದ ಇವರು ಸಂಜೆಯವರೆಗೂ ನೂರಾರು ಕೆಜಿಯಷ್ಟು ಮೀನುಗಳನ್ನು ಹಿಡಿದು ತಮ್ಮ ತಮ್ಮ ಮನೆಗೆ ಕೊಂಡೊಯ್ದರು.