ಕರ್ನಾಟಕ

karnataka

ETV Bharat / state

ಸೆರೆಯಾದ ಹುಲಿ: ಮಾಳಿಗಮ್ಮನ ಹರಕೆ ತೀರಿಸಿದ ಸಿಎಫ್​ಒ, ಸ್ಥಳೀಯರು!

4-5 ವರ್ಷಗಳಿಂದ ಮಾಳಿಗಮ್ಮನ ಪೂಜೆ ನಿಂತಿತ್ತು. ಪೂಜೆ ನಿಲ್ಲಿಸಿದ್ದರಿಂದಲೇ ಹುಲಿ ದಾಳಿಗಳಾಗುತ್ತಿವೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿತ್ತು. ಆದರಂತೆ, ಹುಲಿ ಸೆರೆಯಾದರೆ ಪೂಜೆ ಸಲ್ಲಿಸುವುದಾಗಿ ಬಂಡೀಪುರ ಸಿಎಫ್ಒ ಪೂಜೆ ಹರಕೆ ಕಟ್ಟಿಕೊಂಡಿದ್ದರು.

ಮಾಳಿಗಮ್ಮನ ಹರಕೆ ತೀರಿಸಿದ ಸಿಎಫ್​ಒ, ಸ್ಥಳೀಯರು

By

Published : Oct 15, 2019, 8:50 PM IST

Updated : Oct 16, 2019, 5:06 AM IST

ಚಾಮರಾಜನಗರ: ತಿಂಗಳುಗಟ್ಟಲೇ ಜನರ ನಿದ್ರೆಗೆಡಿಸಿದ್ದ ಹುಲಿರಾಯನ ಸೆರೆ ಹಿಡಿದ ಬಳಿಕ ಗ್ರಾಮಸ್ಥರ ತೀರ್ಮಾನ ಮತ್ತು ಸಿಎಫ್ಒ ಹರಕೆಯಂತೆ ಇಂದು ಹುಂಡಿಪುರದ ಮಾಳಿಗಮ್ಮ ದೇವರಿಗೆ ಪೂಜೆ ಸಲ್ಲಿಸಲಾಯಿತು.

ಕೋಮು ಸಂಘರ್ಷದಿಂದ ಕಳೆದ 4-5 ವರ್ಷಗಳಿಂದ ಮಾಳಿಗಮ್ಮನ ಪೂಜೆ ನಿಂತಿತ್ತು. ಪೂಜೆ ನಿಲ್ಲಿಸಿದ್ದರಿಂದಲೇ ಹುಲಿ ದಾಳಿಗಳಾಗುತ್ತಿವೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿತ್ತು. ಆದರಂತೆ, ಹುಲಿ ಸೆರೆಯಾದರೆ ಪೂಜೆ ಸಲ್ಲಿಸುವುದಾಗಿ ಬಂಡೀಪುರ ಸಿಎಫ್ಒ ಪೂಜೆ ಹರಕೆ ಕಟ್ಟಿಕೊಂಡಿದ್ದರು.

ಮಾಳಿಗಮ್ಮನ ಹರಕೆ ತೀರಿಸಿದ ಸಿಎಫ್​ಒ, ಸ್ಥಳೀಯರು

ಕಾಕತಾಳೀಯ ಎಂಬಂತೆ ಹರಕೆ ಕಟ್ಟಿಕೊಂಡ ಒಂದೇ ದಿನಕ್ಕೆ ಹುಲಿ ಸೆರೆಯಾದ್ದರಿಂದ ಗ್ರಾಮಸ್ಥರೊಂದಿಗೆ ಸೇರಿ ಸಿಎಫ್ಒ ಬಾಲಚಂದ್ರ ಇಂದು ಮಾಳಿಗಮ್ಮನಿಗೆ ಪೂಜೆ ಸಲ್ಲಿಸಿದರು.‌ಗ್ರಾಮಸ್ಥರು ಚಂದಾ ಎತ್ತಿ ಅನ್ನ ಸಂತರ್ಪಣೆ ಏರ್ಪಡಿಸಿ ಭಕ್ತಿ ಮೆರೆದಿದ್ದಾರೆ.

Last Updated : Oct 16, 2019, 5:06 AM IST

ABOUT THE AUTHOR

...view details