ಕರ್ನಾಟಕ

karnataka

ETV Bharat / state

ಗುಂಡ್ಲುಪೇಟೆಯಲ್ಲಿ ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು - ಗುಂಡ್ಲುಪೇಟೆ ಮಳೆ ಸುದ್ದಿ

ಇಂದ ಗುಂಡ್ಲುಪೇಟೆ ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಯ ಮೇಲೆ ನೀರು ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು.

gundlupet
ಮನೆಗಳಿಗೆ ನುಗ್ಗಿದ ನೀರು

By

Published : Sep 3, 2020, 10:59 PM IST

ಗುಂಡ್ಲುಪೇಟೆ:ತಾಲ್ಲೂಕಿನಾದ್ಯಂತ ಇಂದು ಸಂಜೆ ಸುರಿದ ಮಳೆಗೆ ಗುಂಡ್ಲುಪೇಟೆ ಪೇಟೆ ಪಟ್ಟಣದ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ಕೆಲ ಸಮಯ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಮನೆಗೆ ನುಗ್ಗಿರುವ ಮಳೆ ನೀರು

ಮಳೆಯ ನೀರು ಮನೆಗಳಿಗೆ ನುಗ್ಗಿದ್ದರಿಂದ ನೀರನ್ನು ಹೊರ ಚೆಲ್ಲುವ ದೃಶ್ಯ ಸಾಮಾನ್ಯವಾಗಿತ್ತು. ಗುಂಡ್ಲುಪೇಟೆ ಪಟ್ಟಣದ ಆರ್​ಟಿಓ ಕಚೇರಿಯ ಬಳಿ, ಎಂಡಿಸಿಸಿ ಬ್ಯಾಂಕ್ ವೃತ್ತ, ಮಡಹಳ್ಳಿ ವೃತ್ತ, ಹಳೆಯ ಬಸ್ ನಿಲ್ದಾಣದ ಬಳಿ ನೀರು ನಿಂತು ಜನರ ಸಂಚಾರಕ್ಕೆ ತೊಂದರೆ ಆಯಿತು.

ಮಳೆಯಿಂದಾಗಿ ಪೃಥ್ವಿ ಬುದ್ಧಿಮಾಂಧ್ಯ ಮಕ್ಕಳ ವಸತಿ ಶಾಲೆಯ ಆವರಣದಲ್ಲಿ ನೀರು ತುಂಬಿಕೊಂಡಿದ್ದು, ಮಕ್ಕಳೆಲ್ಲ ಸೇರಿ ನೀರನ್ನು ಹೊರಗೆ ಹಾಕಿದ್ದಾರೆ.

ABOUT THE AUTHOR

...view details