ಚಾಮರಾಜನಗರ :ಮೇ ಫ್ಲವರ್ ಎಂದೇ ಕರೆಯುವ ಗುಲ್ ಮೊಹರ್‌ನ ರಂಗಿಗೆ ಗಡಿಜಿಲ್ಲೆ ಕಲರ್ ಕಲರ್ ಆಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಕೆಂಬಣ್ಣದ ಡೆಕೋರೇಷನ್ ತರ ಗಿಡಗಳು ಹೂ ಬಿಟ್ಟಿದೆ.
ಗುಲ್ ಮೊಹರ್ ರಂಗ್ ಮೋಡಿ.. ಮೇ ಫ್ಲವರ್ ಸೌಂದರ್ಯಕ್ಕೆ ಪ್ರಯಾಣಿಕ ಪುಲ್ ಫಿದಾ - kannada news
ಗಡಿಜಿಲ್ಲೆಯ ರಸ್ತೆಗಳ ಉದ್ದಗಲಕ್ಕೂ ಮೇ ಫ್ಲವರ್ ಬೆಳೆದು ಪ್ರಯಾಣಿಕರನ್ನ ಆಕರ್ಷಿಸುತ್ತಿದ್ದು ಪ್ರಕೃತಿ ಸೌಂದರ್ಯಕ್ಕೆ ದಾರಿಹೋಕರು ಮಾರು ಹೋಗಿದ್ದಾರೆ.
ಮೇ ಫ್ಲವರ್ ಸೌಂದರ್ಯಕ್ಕೆ ಪ್ರಯಾಣಿಕ ಪುಲ್ ಫಿದಾ
ಜಿಲ್ಲೆಯ ಸಂತೇಮರಹಳ್ಳಿ, ಮಾದಾಪುರ, ಗುಂಡ್ಲುಪೇಟೆ, ಬೇಗೂರು, ಮೇಲುಕಾಮನಹಳ್ಳಿ, ಹಂಗಳದ ರಸ್ತೆಗಳ ಉದ್ದಕ್ಕೂ ಗುಲ್ ಮೊಹರ್ ಬೆಡಗು-ಸೊಬಗಿಗೆ ದಾರಿ ಹೋಕರು ನಿಂತು ವಿಶ್ರಾಂತಿ ಪಡೆದು ತೆರಳುತ್ತಿದ್ದಾರೆ. ಕೆಂಪು ಚಪ್ಪರದಂತೆ ಭಾಸವಾಗುವ ಗುಲ್ ಮೋಹರ್ ಯುವಜನತೆಯ ಸೆಲ್ಫಿ ಸ್ಪಾಟಾಗಿ ಕೂಡ ಪರಿಣಮಿಸಿದೆ. ಕ್ಯಾಮರಾ ಕಣ್ಣಲ್ಲಿ ಹೂವಿನ ಅಂದ ಮತ್ತಷ್ಟು ಹೆಚ್ಚಾಗಿ ಕಾಣಿಸುತ್ತದೆ.