ಕರ್ನಾಟಕ

karnataka

ETV Bharat / state

ಧ್ರುವನಾರಾಯಣ ಅಪವಿತ್ರ ಕಾಯಕಯೋಗಿ: ಮಾಜಿ ಶಾಸಕ ಗುರುಸ್ವಾಮಿ - ಕಾಯಕಯೋಗಿ

ತಮ್ಮ ಸಾಧನೆಗಳ ಪುಸ್ತಕಕ್ಕೆ ಕಾಯಕಯೋಗಿ ಎಂದು ಹೆಸರಿಟ್ಟುಕೊಂಡಿದ್ದಾರೆ. ಬಸವಣ್ಣ ಇದ್ದರೆ  ಕಾಯಕಯೋಗಿ ಹೆಸರು ನೋಡಿ ಬೆಚ್ಚಿ ಬೀಳುತ್ತಿದ್ದರು. ಧ್ರುವನಾರಾಯಣ ಪವಿತ್ರ ಕಾಯಕ ಯೋಗಿಯಲ್ಲ, ಅಪವಿತ್ರ ಕಾಯಕಯೋಗಿ ಎಂದು ಟೀಕಿಸಿದರು.

ಧ್ರುವನಾರಾಯಣ

By

Published : Mar 28, 2019, 4:32 PM IST

ಚಾಮರಾಜನಗರ: ಧ್ರುವನಾರಾಯಣ ನರಿ ಬುದ್ದಿಯ ರಾಜಕಾರಣಿ, ಸ್ವಾರ್ಥಿ, ಕಡು ಭ್ರಷ್ಟ ಎಂದು ಮಾಜಿ ಶಾಸಕ ಸಿ.ಗುರುಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ನಾನು ಹೇಳಿದ ಎಲ್ಲಾ ಮಾತುಗಳಿಗೂ ಸಾಕ್ಷ್ಯಗಳನ್ನು ಕೊಡುತ್ತೇನೆ. ಲಿಂಗಾಯಿತ ಸಮುದಾಯದ ಬ್ಯಾನರ್ ಹಾಕಿಕೊಂಡು ಸಭೆ ನಡೆಸಿದ ಅವರು, ಲಿಂಗಾಯತ ಸಮುದಾಯಕ್ಕೆ ನೀಡಿರುವ ಕೊಡುಗೆಯಾದರೂ ಏನು, ಎಷ್ಟು ಅನುದಾನವನ್ನು ಸಮುದಾಯಕ್ಕೆ ಕೊಟ್ಟಿದ್ದಾರೆ. ಸಂಸದರಾಗಿ ಎಷ್ಟು ಬಸವ ಜಯಂತಿಗಳಿಗೆ ಹಾಜರಾಗಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಧ್ರುವನಾರಾಯಣ

ತಮ್ಮ ಸಾಧನೆಗಳ ಪುಸ್ತಕಕ್ಕೆ ಕಾಯಕಯೋಗಿ ಎಂದು ಹೆಸರಿಟ್ಟುಕೊಂಡಿದ್ದಾರೆ. ಬಸವಣ್ಣ ಇದ್ದರೆ ಕಾಯಕಯೋಗಿ ಹೆಸರು ನೋಡಿ ಬೆಚ್ಚಿ ಬೀಳುತ್ತಿದ್ದರು. ಧ್ರುವನಾರಾಯಣ ಪವಿತ್ರ ಕಾಯಕ ಯೋಗಿಯಲ್ಲ, ಅಪವಿತ್ರ ಕಾಯಕಯೋಗಿ ಎಂದು ಟೀಕಿಸಿದರು.

ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಕೊನೆ ಚುನಾವಣೆ ಇದಾಗಿದ್ದು, ಅವರನ್ನು ಗೆಲ್ಲಿಸಿ ಗೌರವಪೂರ್ವಕವಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿಗೊಳಿಸಬೇಕಿದೆ ಎಂದರು.

ABOUT THE AUTHOR

...view details