ಚಾಮರಾಜನಗರ: 2ನೇ ಅಲೆ ಹಾಗೂ ಬ್ರಿಟನ್ ನಲ್ಲಿ ರೂಪುಗೊಂಡಿರುವ ಹೊಸ ಮಾದರಿಯ ಕೊರೊನಾ ಆತಂಕದ ನಡುವೆ ಕೊಳ್ಳೇಗಾಲ ತಾಲೂಕಿಗೆ ಐವರು ಯುನೈಟೆಡ್ ಕಿಂಗ್‌ಡಮ್ ನಿಂದ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಯುಕೆಯಿಂದ ಚಾಮರಾಜನಗರಕ್ಕೆ ಬಂದವರಿಗೆ ಕೋವಿಡ್ ಟೆಸ್ಟ್ ಈ ಕುರಿತು, ಉನ್ನತ ಮೂಲಗಳು ಈಟಿವಿ ಭಾರತಕ್ಕೆ ಖಚಿತಪಡಿಸಿದ್ದು, ಯುಕೆಯಲ್ಲಿ ನೌಕರಿ ಮಾಡುತ್ತಿದ್ದ ಕೊಳ್ಳೇಗಾಲ ಭಾಗದ ಐದು ಮಂದಿ ತವರಿಗೆ ಮರಳಿದ್ದು ಬುಧವಾರ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತದೆ ಎಂದು ಉನ್ನತ ಮೂಲ ತಿಳಿಸಿದೆ.
ಓದಿ: ಇಂಗ್ಲೆಂಡ್ ನಲ್ಲಿ ಕೊರೊನಾ ರೂಪಾಂತರ ವೈರಸ್: ನಿಯಂತ್ರಣ ಕ್ರಮಗಳ ವರದಿ ಕೇಳಿದ ಹೈಕೋರ್ಟ್
ಇನ್ನು, ವಿದೇಶದಿಂದ ಬಂದಿರುವ ಇವರು ಯಾವಾಗ ಬಂದರು, ಎಂಬುದು ನಾಳೆ ಆರೋಗ್ಯ ಇಲಾಖೆ ಸಿಬ್ಬಂದಿ, ತೆರಳಿದ ವೇಳೆ ತಿಳಿಯಲಿದೆ. ಜೊತೆಗೆ, ಇವರ ಟ್ರಾವೆಲ್ ಹಿಸ್ಟರಿಯೂ ಕೂಡ ಗೊತ್ತಾಗಲಿದೆ.
ಮಾಹಿತಿ ನೀಡಲು ಡಿಸಿ ಸೂಚನೆ:
ಯುಕೆಯಿಂದ ಕೆಲವರು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಬ್ರಿಟನ್ ನಿಂದ ಬಂದಿರುವ ಯಾವುದೇ ನಾಗರಿಕರು, ಪ್ರವಾಸಿಗರ ಬಗ್ಗೆ ತುರ್ತಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದ್ದಾರೆ.
ಕೊರೊನಾ ವೈರಾಣುವಿನ ಹೊಸ ಸ್ವರೂಪವು ಬ್ರಿಟನ್ನಲ್ಲಿ ಪತ್ತೆ ಯಾಗಿರುವ ಕಾರಣ ಬ್ರಿಟನ್ನಿಂದ ಜಿಲ್ಲೆಗೆ ಬಂದವರ ಮಾಹಿತಿಯನ್ನು ಕೂಡಲೇ ನೀಡಬೇಕಿದೆ. ಜಿಲ್ಲೆಯ ಹೋಟೆಲ್, ರೆಸಾರ್ಟ್ ಎಲ್ಲಿಯೇ ಆಗಲಿ ಬ್ರಿಟನ್ ದೇಶದಿಂದ ಬಂದು ವಾಸ್ತವ್ಯ ಹೂಡಿದ್ದರೆ, ಅವರ ಕುರಿತು ಮಾಹಿತಿಯನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ ನೀಡುವಂತೆ ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.