ಕರ್ನಾಟಕ

karnataka

ETV Bharat / state

ಸಿನಿಮಾ ಶೈಲಿಯಲ್ಲಿ ರಕ್ತಚಂದನ ಸಾಗಣೆ: ಚಾಮರಾಜನಗರದಲ್ಲಿ ಐವರು ಖದೀಮರ ಬಂಧನ - ಚಾಮರಾಜನಗರದಲ್ಲಿ ರಕ್ತಚಂದನ ಸಾಗಾಟ

ಚಾಮರಾಜನಗರದಲ್ಲಿ 5 ಆರೋಪಿಗಳು ಅಕ್ರಮವಾಗಿ ರಕ್ತಚಂದನ ಸಾಗಿಸುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ರಕ್ತಚಂದನ ಸಾಗಾಟ
ರಕ್ತಚಂದನ ಸಾಗಾಟ

By ETV Bharat Karnataka Team

Published : Sep 7, 2023, 9:44 AM IST

ಚಾಮರಾಜನಗರ:ಸೂಪರ್ ಹಿಟ್ ಮೂವಿyಒಂದರ ರೀತಿಯಲ್ಲಿ ರಕ್ತ ಚಂದನ ಸಾಗಿಸುತ್ತಿದ್ದ ಘಟನೆ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ ಲಕ್ಕೂರು ಬಳಿ ನಡೆದಿದೆ. ಬೆಂಗಳೂರು ಮೂಲದ ರವಿ(47), ಚಾಮರಾಜನಗರದ ಸರಗೂರು ಮೋಳೆಯ ಎಸ್ ಎಂ ಗೋವಿಂದರಾಜು(43), ಆನಂದ್(40), ಸಿ ಎಸ್ ಆಸ್ಕರ್ ಪಾಷ(63), ಮಹೇಂದ್ರ(32) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ ಮೇಲೆ ಹೂಕೋಸುಗಳನ್ನು ತುಂಬಿಕೊಂಡು ಅವುಗಳ ಮಧ್ಯೆ ಅಕ್ರಮವಾಗಿ ರಕ್ತ ಚಂದನ ಮರದ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬಂಡೀಪುರದ ಅರಣ್ಯ ಇಲಾಖೆಯ ಮೂರು ತಂಡಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸಂಬಂಧ ಗುಂಡ್ಲುಪೇಟೆ ಬಫರ್ ಜೇನ್ ವಲಯದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ ಬೊಲೆರೊ ವಾಹನ ಸೇರಿದಂತೆ 50 ಕೆಜಿಯಷ್ಟು ರಕ್ತಚಂದನದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಳ್ತಂಗಡಿಯಲ್ಲೂ ಅಕ್ರಮ ಸಾಗಣೆ, ಪೊಲೀಸರ ವಶಕ್ಕೆ: ಬೆಳ್ತಂಗಡಿಯ ವೇಣೂರು ಸಮೀಪ ಕರಿಮಣೇಲು ಎಂಬಲ್ಲಿ ಬೆಂಗಳೂರು ಸಿಐಡಿ ಪೊಲೀಸ್ ಅರಣ್ಯ ಘಟಕದ (FMS) ತಂಡವು 125 ಕೆಜಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರಕ್ತ ಚಂದನ ವಶಕ್ಕೆ ಪಡೆದುಕೊಂಡಿದ್ದರು. ನಂತರ ವೇಣೂರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು. ಬಂಟ್ವಾಳ ತಾಲೂಕಿನ ಮಾವಿನಕಟ್ಟೆ ನಿವಾಸಿ ಖಾಲಿದ್, ಗುರುವಾಯನಕೆರೆ ನಿವಾಸಿ ದೀಕ್ಷಿತ್ ಎಂಬ ಇಬ್ಬರು ಆರೋಪಿಗಳಾಗಿದ್ದು ಬಂಧಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ವ್ಯಾಪ್ತಿಯ ಕರಿಮಣೇಲು ಎಂಬಲ್ಲಿಂದ ರಕ್ತಚಂದನ ಸಾಗಾಟ ನಡೆಸಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಘಟಕದ ಸಬ್​ಇನ್ಸ್ಪೆಕ್ಟರ್ ಜಾನಕಿ ನೇತೃತ್ವದಲ್ಲಿ ಸಿಬ್ಬಂದಿ, ಆರೋಪಿಗಳಸಹಿತ ಮಾಲು ಹಾಗು ಸಾಗಾಟಕ್ಕೆ ಬಳಸಿದ ವಾಹನ ಜಪ್ತಿ ಮಾಡಿದ್ದರು.

ರಕ್ತ ಚಂದನ ಸಾಗಣೆ 3 ಆರೋಪಿಗಳು ಬಂಧನ:ರಕ್ತ ಚಂದನ ಸಾಗಣೆ ಮಾಡುತ್ತಿದ್ದ 3 ಆರೋಪಿಗಳನ್ನು ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದರು. ಆನೇಕಲ್ ತಾಲೂಕಿನ ಸರ್ಜಾಪುರದ ಬಷೀರ್ ಅಹಮದ್, ಅಡಿಗಾರ ಕಲ್ಲಹಳ್ಳಿಯ ನಿಜಾಮ್ ಹಾಗೂ ತೌಷಿದ್ ಬಂಧಿತ ಆರೋಪಿಗಳು. ಈ ಆರೋಪಿಗಳು ಕರ್ನಾಟಕದ ಗಡಿ ತಮಿಳುನಾಡಿನ ಬಾಗಲೂರಿನಿಂದ ಬೆಂಗಳೂರಿಗೆ ವಾಹನದಲ್ಲಿ ಅಕ್ರಮವಾಗಿ ರಕ್ತ ಚಂದನವನ್ನು ಸಾಗಣೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಹೆಬ್ಬಗೋಡಿ ಪೊಲೀಸರ ತಂಡ ಬೊಮ್ಮಸಂದ್ರದ ಬಳಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ 35 ಲಕ್ಷ ರೂ.ಮೌಲ್ಯದ 750 ಕೆ.ಜಿ ರಕ್ತ ಚಂದನವನ್ನು ವಶಕ್ಕೆ ಪಡೆದುಕೊಂಡಿದ್ದರು.

ಇದನ್ನೂ ಓದಿ:ಬೆಳ್ತಂಗಡಿ: 125 ಕೆ.ಜಿ ರಕ್ತ ಚಂದನ ಸಾಗಾಟ ಪತ್ತೆ

ABOUT THE AUTHOR

...view details