ಚಾಮರಾಜನಗರ: ಅರಣ್ಯಕ್ಕೆ ಬೆಂಕಿ ಬಿದ್ದ ಪರಿಣಾಮ ಸುಮಾರು 120 ಕ್ಕೂ ಹೆಚ್ಚು ಎಕರೆ ಪ್ರದೇಶ ಸುಟ್ಟು ಭಸ್ಮವಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಠಾಣಾ ವ್ಯಾಪ್ತಿಯ ದೇಪಾಪುರ ಗ್ರಾಮದ ಬಳಿ ನಡೆದಿದೆ.
ಗುಂಡ್ಲುಪೇಟೆ ಸಮೀಪ ಅರಣ್ಯಕ್ಕೆ ಬೆಂಕಿ: 120ಕ್ಕೂ ಹೆಚ್ಚು ಎಕರೆ ಸುಟ್ಟು ಭಸ್ಮ
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಠಾಣಾ ವ್ಯಾಪ್ತಿಯ ದೇಪಾಪುರ ಗ್ರಾಮದ ಬಳಿಯಿರುವ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದ್ದು, ಸುಮಾರು 120 ಎಕರೆ ಬೆಂಕಿಗಾಹುತಿಯಾಗಿದೆ.
ಗುಂಡ್ಲುಪೇಟೆ ಸಮೀಪ ಅರಣ್ಯಕ್ಕೆ ಬೆಂಕಿ
ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಕಾಡು, ಗೋಮಾಳ ಹಾಗೂ ಜಮೀನಿನಲ್ಲಿ ಬೆಂಕಿ ಬಿದ್ದಿದ್ದು, ಸುಮಾರು 120 ಎಕರೆಯಷ್ಟು ಪ್ರದೇಶ ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ಬೀಳಲು ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ.