ಚಾಮರಾಜನಗರ:ಜಮೀನಿಗೆ ಹಾಕಿದ್ದ ಬೆಂಕಿ ಕಾಡಿಗೆ ಹಬ್ಬಿದ ಪರಿಣಾಮ ಸುಮಾರು ಹತ್ತು ಎಕರೆ ಭೂಮಿ ಸುಟ್ಟುಕರಕಲಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದ ಪಾರ್ವತಿ ಬೆಟ್ಟದಲ್ಲಿ ನಡೆದಿದೆ.
ಗುಂಡ್ಲುಪೇಟೆಯ ಪಾರ್ವತಿ ಬೆಟ್ಟದಲ್ಲಿ ಅಗ್ನಿ ಅವಘಡ..! - ಚಾಮರಾಜನಗರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಅರಣ್ಯ ವಲಯದ ಬಫರ್ ಜೋನ್ನ ಪಾರ್ವತಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 10 ಎಕರೆ ಭೂಮಿ ಸುಟ್ಟು ಕರಕಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಅರಣ್ಯ ವಲಯದ ಬಫರ್ ಜೋನಿಗೆ ಈ ಭಾಗ ಬರಲಿದ್ದು, ಸಿದ್ದಪ್ಪಾಜಿ ಗದ್ದಿಗೆ ಬಳಿ ಬೆಂಕಿ ಹೊತ್ತಿ ಉರಿದು ಹತ್ತಾರು ಎಕರೆ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದರೂ ಬೆಟ್ಟ ಹತ್ತಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೀಟನ್, ಹಸಿ ಸೊಪ್ಪಿನ ಮೂಲಕ ಬೆಂಕಿ ಆರಿಸುತ್ತಿದ್ದಾರೆ.
ಬೆಂಕಿ ನಂದಿಸುವ ಕೆಲಸಕ್ಕೆ ಗ್ರಾಮದ ಯುವಕರು ಕೈ ಜೋಡಿಸಿದ್ದು, ಬೆಂಕಿಯನ್ನು ತಹಬದಿಗೆ ತರಲು ಯಶಸ್ವಿಯಾಗಿದ್ದೇವೆ ಎಂದು ಕಂದೇಗಾಲದ ರಾಜೀವ್ ತಿಳಿಸಿದ್ದಾರೆ. ಉದ್ದೇಶಪೂರ್ವಕವಾಗಿ ಇದು ಬೆಂಕಿ ಇಟ್ಟಿರುವುದಲ್ಲ . ಜಮೀನಿಗೆ ಹಾಕಿದ್ದ ಬೆಂಕಿ ಕುರುಚಲು ಕಾಡಿಗೆ ಹಬ್ಬಿದೆ ಎಂದು ಪ್ರತಿಕ್ರಿಯಿಸಿದ್ದಾರೆ.