ಕರ್ನಾಟಕ

karnataka

ETV Bharat / state

ಗುಂಡ್ಲುಪೇಟೆ ಮಾರಾಮಾರಿ ಪ್ರಕರಣ: 18 ಮಂದಿ ವಿರುದ್ಧ ಎಫ್ಐಆರ್ - Gundlupete police

ಹಳೆಯದ್ವೇಷಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಮೂವರು ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಮಂದಿ ವಿರುದ್ಧ ಗುಂಡ್ಲುಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಎರಡು ಕುಟುಂಬಗಳ ನಡುವೆಯಿದ್ದ ಹಣಕಾಸಿನ ವಿಚಾರ, ಅಕ್ರಮ ಗೋ ಸಾಗಾಣೆ ಕುರಿತಾದ ಜಗಳ, ಕುಟುಂಬಗಳ ನಡುವಿನ ದ್ವೇಷ ಗಲಾಟೆಗೆ ಕಾರಣವಾಗಿರಬಹುದು ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

FIR registered against 18 persons in the Gundlupete case
ಗುಂಡ್ಲುಪೇಟೆ ಮಾರಾಮಾರಿ ಪ್ರಕರಣ:18 ಮಂದಿ ವಿರುದ್ಧ ಎಫ್ಐಆರ್

By

Published : May 27, 2020, 11:31 PM IST

ಗುಂಡ್ಲುಪೇಟೆ (ಚಾಮರಾಜನಗರ): ಮಂಗಳವಾರ ತಡರಾತ್ರಿ ಹಳೆಯದ್ವೇಷಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಮೂವರು ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಜನರ ವಿರುದ್ಧ ಗುಂಡ್ಲುಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಗುಂಡ್ಲುಪೇಟೆ ಜಾಕೀರ್ ಹುಸೇನ್ ನಗರದ ಹನ್ಸ್, ಅಸ್ಲಾಂ, ಇಕ್ರಂ, ಅನೀಸ್, ಜಮೀರ್, ಇನ್ನ, ಖುರ್ರಂ, ಈಜಾಸ್, ಮುದಾಸೀರ್, ಪಾಪ ಅಲಿಯಾಸ್ ಫರೂಖ್, ಸುಹೇಲ್, ಇಮ್ತಿಯಾಜ್, ಅತ್ಲಾಫ್, ಮುಜಾಮಿದ್, ಫೈರೋಜ್, ಅಮ್ಜತ್, ರಿಯಾಜ್, ಹನೀಫ್ ಎಂಬವರ ಮೇಲೆ ಪ್ರಕರಣ ದಾಖಲಾಗಿದ್ದು, ಇವರನ್ನು ಈಗಾಗಲೇ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಲಾಟೆಯ ಪ್ರತ್ಯಕ್ಷದರ್ಶಿ ಹಾಗೂ ಗಾಯಾಳುವಾದ ಮುಝಿಬಿಲ್ ರೆಹಮಾನ್ ನೀಡಿದ ದೂರಿನ ಮೇರೆಗೆ ಪೊಲೀಸರು 18 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಪರಾರಿಯಾದವರಿಗೆ ಬಲೆ ಬೀಸಲಾಗಿದೆ ಎನ್ನಲಾಗಿದೆ.

ಎರಡು ಕುಟುಂಬಗಳ ನಡುವೆ ಇದ್ದ ಹಣಕಾಸಿನ ವಿಚಾರ, ಅಕ್ರಮ ಗೋ ಸಾಗಾಣೆ ಕುರಿತಾದ ಜಗಳ, ಕುಟುಂಬಗಳ ನಡುವಿನ ದ್ವೇಷ ಗಲಾಟೆಗೆ ಕಾರಣವಾಗಿರಬಹುದು ಎನ್ನಲಾಗಿdಎ. ಸದ್ಯ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಎಸ್ಪಿ, ಎಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಬೀಡು ಬಿಟ್ಟಿದ್ದು, ಗುಂಡ್ಲುಪೇಟೆಯಲ್ಲಿ ಸದ್ಯ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ABOUT THE AUTHOR

...view details