ಕರ್ನಾಟಕ

karnataka

ETV Bharat / state

ತೆಂಗಿನಕಾಯಿ ಚಿಪ್ಪಿನ ಮಾಲೆ ಧರಿಸಿ ರೈತರ ಪ್ರತಿಭಟನೆ: ಕೇಂದ್ರ, ಪೊಲೀಸರ ವಿರುದ್ಧ ಆಕ್ರೋಶ

ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಜಾರಿಗೆ ತರುತ್ತಿದೆ ಎಂದು ಆರೋಪಿಸಿ ಚಾಮರಾಜನಗರದಲ್ಲಿಂದು ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

Farmers protest
ಪ್ರತಿಭಟನೆ

By

Published : Dec 2, 2020, 3:15 PM IST

ಚಾಮರಾಜನಗರ: ಹೊಸ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ವಿರೋಧಿಸಿ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಧರಣಿ ಬೆಂಬಲಿಸಿ ನಗರದಲ್ಲಿಂದು ರಾಜ್ಯ ರೈತ ಸಂಘ ವಿನೂತನವಾಗಿ ಪ್ರತಿಭಟನೆ ನಡೆಸಿತು.

ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

ಚಾಮರಾಜೇಶ್ವರ ದೇಗುಲದಿಂದ ಭುವನೇಶ್ವರಿ ವೃತ್ತದವರೆಗೆ ತೆಂಗಿನ ಚಿಪ್ಪಿನ ಮಾಲೆಗಳನ್ನು ಧರಿಸಿ, ತಲೆ ಮೇಲೆ ಚಪ್ಪಡಿ ಕಲ್ಲುಗಳನ್ನು ಹೊತ್ತ ರೈತ ಹೋರಾಟಗಾರರು ಪ್ರಧಾನಿ ಮೋದಿ ಹಾಗೂ ಚಾಮರಾಜನಗರ ಸಂಚಾರಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು

ಇದೇ ವೇಳೆ, ಕೇಂದ್ರ ಸರ್ಕಾರವನ್ನು ಸಮಾಧಿ ಮಾಡುವುದರ ಪ್ರತೀಕವಾಗಿ ಅಣಕು ಅಂತ್ಯಸಂಸ್ಕಾರ ನಡೆಸಿ ಆಕ್ರೋಶ ಹೊರಹಾಕಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು.

ABOUT THE AUTHOR

...view details