ಚಾಮರಾಜನಗರ: ರೈತ ಸಂಘಟನೆಗಳು ಇಂದು ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿದ್ದು, ನಗರದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕೆಎಸ್ಆರ್ಟಿಸಿ ಬಸ್ಗಳು ಮಧ್ಯಾಹ್ನ 12 ಗಂಟೆಯಿದ ಸಂಚಾರ ಆರಂಭಿಸಿದ್ದರಿಂದ ಕುಪಿತಗೊಂಡ ರೈತರು ಕೆಎಸ್ಆರ್ಟಿಸಿ ಬಸ್ ಮುಂಭಾಗ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರದಲ್ಲಿ ಬಸ್ ಸಂಚಾರ ಆರಂಭಿಸಿದ್ದಕ್ಕೆ ರೈತರ ಆಕ್ರೋಶ: ಸಂಚಾರ ಅಸ್ತವ್ಯಸ್ತಕ್ಕೆ 8 ಲಕ್ಷ ರೂ. ನಷ್ಟ - ಕರ್ನಾಟಕ ಬಂದ್
ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಇಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆ, ಮಧ್ಯಾಹ್ನ 12 ಗಂಟೆಯ ನಂತರ ಚಾಮರಾಜನಗರದಿಂದ ವಿವೆಧೆಡೆಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕೆ ಕೋಪಗೊಂಡ ರೈತರು ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿದರು.
ಲಕ್ಷ್ಮಣ ಸವದಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಬಸ್ ಸಂಚಾರ ಆರಂಭಿಸದಂತೆ ನಿಲ್ದಾಣದ ಟಿಸಿಯೊಂದಿಗೆ ರೈತರು ಹಾಗೂ ಇತರ ಸಂಘಟನೆಗಳು ವಾಕ್ಸಮರ ನಡೆಸಿದರು. ಈ ಬಂದ್ಗೆ ಬೆಂಬಲ ವ್ಯಕ್ತಪಡಿಸಿ, ರೈತರ ಪರ ನಿಲ್ಲದೇ, ಬಸ್ ಸಂಚಾರ ಆರಂಭಿಸಿದ್ದಕ್ಕೆ ಬಸ್ ನಿಲ್ದಾಣದ ಮುಂದೆ ಧರಣಿ ನಡೆಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಇನ್ನು, ಬಂದ್ ಕುರಿತು, ಸಾರಿಗೆ ಸಂಸ್ಥೆಯ ಚಾಮರಾಜನಗರ ಉಪ ವಿಭಾಗ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈಟಿವಿ ಭಾರತದೊಂದಿಗೆ ಮಾತನಾಡಿ, ಬೆಳಿಗ್ಗೆಯಿಂದ ಬಸ್ ಸಂಚಾರ ಆರಂಭಿಸಿರಲಿಲ್ಲ, ಪರಿಸ್ಥಿತಿ ಅವಲೋಕಿಸಿ ಸಂಚಾರ ಆರಂಭಿಸಲಾಗುವುದು. ಅಂದಾಜು 7- 8 ಲಕ್ಷ ರೂ. ನಷ್ಟವಾಗಿದೆ. ಪ್ರಯಾಣಿಕರು ಈಗೀಗ ಬರುತ್ತಿದ್ದಾರೆ ಎಂದು ತಿಳಿಸಿದರು.