ಚಾಮರಾಜನಗರ: ಎರಡು ಆನೆಗಳ ಕಾಳಗವನ್ನು ನೋಡಿ ವಾಹನ ಸವಾರರು ಸಂತಸಪಟ್ಟ ಘಟನೆ ಚಾಮರಾಜನಗರ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯ ಪುಣಜನೂರು ಚೆಕ್ ಪೋಸ್ಟ್ ಸಮೀಪ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಗಜ ಕಾಳಗ: ಆನೆಗಳ ಆರ್ಭಟ ಕಂಡು ಹೌಹಾರಿದ ಸವಾರರು - Elephants fight on the national highway
ಚಾಮರಾಜನಗರ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯ ಪುಣಜನೂರು ಚೆಕ್ ಪೋಸ್ಟ್ ಸಮೀಪ ಎರಡು ಆನೆಗಳು ಕಾಳಗ ನಡೆಸುತ್ತಿದ್ದು, ಈ ರೋಮಾಂಚನಕಾರಿ ದೃಶ್ಯವನ್ನು ವಾಹನ ಸವಾರರು ಕಣ್ತುಂಬಿಕೊಂಡಿದ್ದಾರೆ.
ಗಜ ಕಾಳಗ
ರಾಷ್ಟ್ರೀಯ ಹೆದ್ದಾರಿ ಸಮೀಪ ಆನೆಗಳು ಘೀಳಿಟ್ಟು ಸೊಂಡಿಲುಗಳನ್ನು ನುಳಿದು ಕಾದಾಡುತ್ತಿದ್ದವು. ಈ ರೋಮಾಂಚನಕಾರಿ ದೃಶ್ಯವನ್ನು ವಾಹನ ಸವಾರರು ಕಣ್ತುಂಬಿಕೊಂಡಿದ್ದಾರೆ. ಬಣ್ಣಾರಿ ದೇಗುಲಕ್ಕೆ ತೆರಳಿದ್ದ ಚಾಮರಾಜನಗರದ ಮಂಜು ಹಾಗೂ ಜವರ ಎಂಬವರು ಕಾಳಗದ ವಿಡಿಯೋವನ್ನು ಸೆರೆಹಿಡಿದಿದ್ದಾರೆ.
ಇನ್ನು ಆನೆಗಳ ಘೀಳಿನ ಶಬ್ಧ, ಅವುಗಳ ಕಾದಾಟ ನೋಡಿದರೆ ಭಯವಾಗುವಂತಿತ್ತು. ಸವಾರರು, ವಾಹನ ಚಾಲಕರು ಕಾಳಗ ನೋಡಲು ಜಮಾಯಿಸಿದ್ದರಿಂದ ಅರಣ್ಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಎಲ್ಲರನ್ನು ಚದುರಿಸಿದರು ಎಂದು ಜವರ ತಿಳಿಸಿದ್ದಾರೆ.