ಚಾಮರಾಜನಗರ:ಕೆಸರು ಮಿಶ್ರಿತ ನೀರು ಕುಡಿದು ಒಂಟಿ ಸಲಗವೊಂದು ಮೃತಪಟ್ಟಿರುವ ಘಟನೆ ಮಲೆಮಹದೇಶ್ಚರ ವನ್ಯಜೀವಿಧಾಮದ ಬಫರ್ ಜೋನಿನಲ್ಲಿ ನಡೆದಿದೆ.
ನೀರಿಗಾಗಿ ಹಾಹಾಕಾರ: ಕೆಸರು ಮಿಶ್ರಿತ ನೀರು ಕುಡಿದು ಆನೆ ಸಾವು - ಒಂಟಿ ಸಲಗ
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ನೀರಿಗಾಗಿ ಪ್ರಾಣಿಗಳ ಪರದಾಟ. ಕೆಸರು ಮಿಶ್ರಿತ ನೀರು ಕುಡಿದು ಆನೆ ಸಾವು.
ಸಲಗ ಸಾವು
ಸಲಗಕ್ಕೆ ಅಂದಾಜು 25 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದ್ದು, ಕೆಸರು ಮಿಶ್ರಿತ ನೀರು ಸೇವಿಸಿ ಬಳಿಕ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದೆ ಎಂದು ಮೂಲಗಳು ಖಚಿತಪಡಿಸಿವೆ.
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪ್ರಾಣಿಗಳು ಕುಡಿಯುವ ನೀರಿಗೆ ಪರದಾಡುತ್ತಿವೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.