ಚಾಮರಾಜನಗರ: ವಿದ್ಯುತ್ ತಗುಲಿ ಆನೆಯೊಂದು ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಸಮೀಪದ ಸಿರಿಗೋಡು ಎಂಬಲ್ಲಿ ನಡೆದಿದೆ.
ಚಾಮರಾಜನಗರ: ವಿದ್ಯುತ್ ತಗುಲಿ ಆನೆ ಸಾವು - Chamarajanagara latest news
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಸಮೀಪದ ಸಿರಿಗೋಡು ಎಂಬಲ್ಲಿ ವಿದ್ಯುತ್ ತಗುಲಿ ಆನೆಯೊಂದು ಸಾವನ್ನಪ್ಪಿದೆ.
Elephant died
ಆನೆಗೆ ಅಂದಾಜು 35 ವರ್ಷ ವಯಸ್ಸಾಗಿದ್ದು, ಇದು ಆಹಾರ ಹುಡುಕುತ್ತಾ ಹೋಗುತ್ತಿರುವಾಗ ವಿದ್ಯುತ್ ತಗುಲಿ ಸಾವನ್ನಪ್ಪಿದೆ. ಶ್ಯಾಮ್ ಎಂಬುವರು ಬೆಳೆ ರಕ್ಷಣೆಗಾಗಿ ಸೋಲಾರ್ ಬೇಲಿ ಹಾಕಿಸಿ ಅಕ್ರಮವಾಗಿ ವಿದ್ಯುತ್ ಹಾಯಿಸಿರುವುದು ಆನೆ ಸಾವಿಗೆ ಕಾರಣ ಎನ್ನಲಾಗುತ್ತಿದೆ.
ಈ ಸಂಬಂಧ ಮಲೆ ಮಹಾದೇಶ್ವರ ವನ್ಯಜೀವಿ ಧಾಮದ ಅಧಿಕಾರಿಗಳು ಶ್ಯಾಮ್ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಬಂಧಿಸಲು ಮುಂದಾಗಿದ್ದಾರೆ.