ಕರ್ನಾಟಕ

karnataka

ETV Bharat / state

ಬೇಡ ಅಂದ್ರು ಮುಂದಕ್ಕೆ ಹೋದ ಸಫಾರಿ ವಾಹನ ಚಾಲಕ: ಕೋಪಗೊಂಡ ಗಜರಾಜ ಮಾಡಿದ್ದೇನು ಗೊತ್ತಾ? - ಬಂಡೀಪುರ ಸಫಾರಿ

ಜಂಗಲ್ ಲಾಡ್ಜ್​​​ನ ಸಫಾರಿ ವಾಹನದ ಮೇಲೆ ಆನೆ ದಾಳಿ ಮಾಡಿದ ಕಾರಣ ಪ್ರವಾಸಿಗರು ಕ್ಷಣ ಕಾಲ ಆತಂಕಕ್ಕೀಡಾದ ಘಟನೆ ಬಂಡೀಪುರ ಸಫಾರಿ ಜೋನ್​​​ನಲ್ಲಿ ನಡೆದಿದೆ.

ಏಕಾ ಏಕಿ ಆಕ್ರೋಶಗೊಂಡ ಗಜರಾಜ

By

Published : Jul 29, 2019, 8:52 PM IST

ಚಾಮರಾಜನಗರ: ಸಫಾರಿ ವಾಹನದ ಮೇಲೆ ಆನೆಯೊಂದು ದಾಳಿ ಮಾಡಿ ವ್ಯಾನಿನ ಗ್ಲಾಸ್​​​ಅನ್ನು ಪುಡಿ ಮಾಡಿದ ಘಟನೆ ಬಂಡೀಪುರ ಸಫಾರಿ ಜೋನ್​​​ನಲ್ಲಿ ನಡೆದಿದೆ.

ಜಂಗಲ್ ಲಾಡ್ಜ್​​​ನ ಸಫಾರಿ ವಾಹನದ ಮೇಲೆ ಆನೆ ದಾಳಿ ಮಾಡಿದ್ದು, ಪ್ರವಾಸಿಗರು ಕ್ಷಣ ಕಾಲ ಆತಂಕಕ್ಕೀಡಾಗಿದ್ದರು. ಆನೆಯ ಮುಂದಕ್ಕೆ ಸಫಾರಿ ವ್ಯಾನ್ಅನ್ನು ಓಡಿಸಿದ್ದರಿಂದಲೇ ಒತ್ತಡಕ್ಕೊಳಗಾದ ಗಜರಾಜ ದಾಳಿ ಮಾಡಿದೆ ಎನ್ನಲಾಗ್ತಿದೆ.

ಏಕಾಏಕಿ ಆಕ್ರೋಶಗೊಂಡ ಗಜರಾಜ

ವನ್ಯಜೀವಿಗಳಿಗೂ ಮತ್ತು ಪ್ರವಾಸಿಗರ ನಡುವೆ ಆರೋಗ್ಯಕರ ಅಂತರ ಕಾಯ್ದುಕೊಳ್ಳಬೇಕು‌. ಪ್ರಾಣಿಗಳನ್ನು ದೂರದಿಂದಲೇ ನೋಡಿ ಖುಷಿ ಪಡಬೇಕೇ ಹೊರತು ಅವುಗಳಿಗೆ ತೊಂದರೆ ಕೊಡುವುದು, ಆತಂಕಕ್ಕೀಡು ಮಾಡುವುದರಿಂದ ಇವೆಲ್ಲಾ ನಡೆಯುತ್ತವೆ ಎಂಬುದು ಪರಿಸರ ಪ್ರೇಮಿಗಳ ದೂರಾಗಿದೆ.

ABOUT THE AUTHOR

...view details