ಚಾಮರಾಜನಗರ: ರಾಜ್ಯದ ಪ್ರಸಿದ್ಧ ಪ್ರವಾಸಿ ಸ್ಥಳವಾದ ಭರಚುಕ್ಕಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.
ಭರಚುಕ್ಕಿಯಲ್ಲಿ ಚಿರತೆ ಪ್ರತ್ಯಕ್ಷ: ಭಯಭೀತಗೊಂಡ ಪ್ರವಾಸಿಗರು - ಚಾಮರಾಜನಗರ ಸುದ್ದಿ
ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದ ಬಳಿ ಚಿರತೆ, ಬಂಡೀಪುರ ಕ್ಯಾಂಪಸ್ನಲ್ಲಿ ಹಾದು ಹೋಗಿರುವ ರಾ.ಹೆದ್ದಾರಿಯಲ್ಲಿ ಆನೆ ಕಾಣಿಸಿಕೊಂಡಿರೋದರಿಂದ ಜನರು ಹಾಗೂ ಪ್ರವಾಸಿಗರು ಕೆಲಕಾಲ ಪುಳಕಿತರಾಗುವುದರ ಜೊತೆಗೆ ಆತಂಕಕ್ಕೆ ಒಳಗಾಗಿದ್ದರು.
ಬಂಡೀಪುರದಲ್ಲಿ ಗಜರಾಜ, ಭರಚುಕ್ಕಿಯಲ್ಲಿ ಚಿರತೆ
ಇನ್ನು ಬಂಡೀಪುರ ಕ್ಯಾಂಪಸ್ನಲ್ಲಿ ಹಾದು ಹೋಗಿರುವ ರಾ.ಹೆದ್ದಾರಿ ನಡುವೆ ಒಂಟಿ ಸಲಗವೊಂದು ರಸ್ತೆದಾಟುವ ವೇಳೆ ನಿಂತು ಪ್ರವಾಸಿಗರಿಗೆ ಪುಳಕ ಉಂಟುಮಾಡಿತ್ತು. ಮತ್ತೊಂದೆಡೆಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದರು.
ಭರಚುಕ್ಕಿ ಜಲಪಾತದ ಸಮೀಪದ ಜಾಗೇರಿ ಅರಣ್ಯ ಪ್ರದೇಶದಿಂದ ಬೇಟೆಯಾಡುವ ಸಲುವಾಗಿ ಬಂದು ಪೊದೆ ಸಮೀಪದಲ್ಲಿ ಚಿರತೆಯು ಕುಳಿತಿದೆ . ಈ ವೇಳೆ ಪ್ರವಾಸಿಗರೊಬ್ಬರು ಅದರ ಫೋಟೋ ಕ್ಲಿಕ್ಕಿಸಿದ್ದಾರೆ.