ಕರ್ನಾಟಕ

karnataka

ETV Bharat / state

ಕ್ವಾರಿ ಕುಸಿತ ಪ್ರಕರಣದ ಆರೋಪಿ ಮನೆಯಲ್ಲಿ ಗರುಡಗಳು ಪತ್ತೆ: ಅರಣ್ಯ ಇಲಾಖೆಯಿಂದ ರಕ್ಷಣೆ

ಕ್ವಾರಿ ಕುಸಿದ ಪ್ರಕರಣದ ಉಪಗುತ್ತಿಗೆದಾರನ ಮನೆಯಲ್ಲಿ ಗರುಡಗಳು ಪತ್ತೆಯಾಗಿದ್ದು, ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅವುಗಳನ್ನು ರಕ್ಷಿಸಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯದಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

eagles found in the home of  accuse in quarry collapse case
ಕ್ವಾರಿ ಕುಸಿತ ಪ್ರಕರಣದ ಆರೋಪಿ ಮನೆಯಲ್ಲಿ ಗರುಡಗಳು ಪತ್ತೆ

By

Published : Mar 6, 2022, 8:21 PM IST

ಚಾಮರಾಜನಗರ:ಗುಂಡ್ಲುಪೇಟೆ ಮಡಹಳ್ಳಿ ಕ್ವಾರಿ ಕುಸಿತ ಪ್ರಕರಣದ ಆರೋಪಿ ಮನೆಯಲ್ಲಿ ಸೆರೆ ಹಿಡಿದು ಸಾಕುತ್ತಿದ್ದ ಗರುಡಗಳು ಪತ್ತೆಯಾಗಿವೆ.

ಕ್ವಾರಿಯನ್ನು ಉಪಗುತ್ತಿಗೆ ಪಡೆದಿದ್ದ ಹಕೀಂ ಎಂಬಾತನ ಗುಂಡ್ಲುಪೇಟೆ ಪಟ್ಟಣದ ಮನೆಯಲ್ಲಿ ಗರುಡಗಳನ್ನು ಸಾಕುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಧಿಕಾರಿಗಳು ಸೆರೆಹಿಡಿದು ಸಾಕುತ್ತಿದ್ದ ಗರುಡಗಳನ್ನು (ಬ್ರಾಹ್ಮಿಣಿ ಕೈಟ್ಸ್) ರಕ್ಷಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಯುವತಿಯನ್ನ ವರಿಸಿದ್ದ ಐವರಿಕೋಸ್ಟ್ ಪ್ರಜೆ.. ಮದುವೆ ಹಿಂದಿತ್ತು ಮಾದಕ ದಂಧೆಯ ಮಾಸ್ಟರ್ ಪ್ಲಾನ್!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯದಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಕ್ವಾರಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರಿ ಮಾಲೀಕ ಮಹೇಂದ್ರಪ್ಪ ಹಾಗೂ ಉಪಗುತ್ತಿಗೆದಾರ ಹಕೀಂ ನಾಪತ್ತೆಯಾಗಿದ್ದು, ಪತ್ತೆಗೆ ತಂಡ ರಚಿಸಲಾಗಿದೆ.

For All Latest Updates

TAGGED:

ABOUT THE AUTHOR

...view details