ಕರ್ನಾಟಕ

karnataka

ETV Bharat / state

ಗ್ರಾಮ ವಾಸ್ತವ್ಯದಲ್ಲಿ ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಸಂವಾದ - kollegal news

ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲಾಧಿಕಾರಿ ಎಂ.ಆರ್.ರವಿ ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ಹೊಸಮಾಲಂಗಿ ಗ್ರಾಮದಲ್ಲಿ ವ್ಯಾಸ್ತವ್ಯ ಹೂಡಿದ್ದಾರೆ.

ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಮಕ್ಕಳೊಂದಿಗೆ ಸಂವಾದ
ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಮಕ್ಕಳೊಂದಿಗೆ ಸಂವಾದ

By

Published : Feb 20, 2021, 2:01 PM IST

ಕೊಳ್ಳೇಗಾಲ : ತಾಲೂಕಿನ ಹೊಸ ಮಾಲಂಗಿ ಗ್ರಾಮದ ಸರ್ಕಾರಿ‌ ಪ್ರೌಢಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಡುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ನಂತರ ಆರೋಗ್ಯ ಶಿಬಿರ ಉದ್ಘಾಟಿಸಿದರು. ಬಳಿಕ ಶೈಕ್ಷಣಿಕ ಅಂಗಳವನ್ನು ವೀಕ್ಷಿಸಿದ ಅವರು ಶಿಕ್ಷಕರ ಬಳಿ ಮಾಹಿತಿ ಪಡೆದು ಕೊಂಡರು.

ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಮಕ್ಕಳೊಂದಿಗೆ ಸಂವಾದ

ಬಳಿಕ ಶಾಲಾ ತರಗತಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳನ್ನು ಮುಗಿಸಿದ್ದಾರೆಯೇ? ಇನ್ನೂ ಎಷ್ಟು ಪಾಠಗಳು ಪ್ರತಿ ವಿಷಯದಲ್ಲಿ ಉಳಿದಿದೆ? ಶಿಕ್ಷಕರು ಪಾಠ ಮಾಡುವುದು ಅರ್ಥವಾಗುತ್ತಾ, ವಿದ್ಯಾಗಮ ಹಾಗೂ ತರಗತಿಯಲ್ಲಿ ನಡೆದ ಪಾಠ -ಪ್ರವಚನವನ್ನು ಕೇಳಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು ಹೌದು ಸರ್ ಶಿಕ್ಷಕರು ಸರಿಯಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪಾಠವನ್ನು ಕೇಳುತ್ತೇವೆ ಚೆನ್ನಾಗಿ ಓದುತ್ತೇವೆ 100 ರಷ್ಟು ಫಲಿತಾಂಶವನ್ನು ಶಾಲೆಗೆ ನೀಡುತ್ತೇವೆ ಎಂದು ಉತ್ತರಿಸಿದರು.

ಕೋವಿಡ್ ನಿಯಮ ಪಾಲಿಸುತ್ತಿದ್ದೀರಾ ಕೋವಿಡ್ ಬಾರದಿರಲೂ ಏನು ಮಾಡಬೇಕು ಎಂದು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ಹೌದು ಸರ್ ನಾವೆಲ್ಲರೂ ಆರೋಗ್ಯವಿದ್ದೇವೆ ಕೊರೊನಾ ಬಾರದಿರಲೂ ಸಾಮಾಜಿಕ ಅಂತರ, ಸಾಬೂನಿನ ಮೂಲಕ ಸಾನಿಟೈಸ್ ಮಾಡಿಕೊಳ್ಳುತ್ತೇವೆ ಹಾಗೂ ಮಾಸ್ಕ್ ಬಳಸುತ್ತೇವೆ ಎಂದು ತಿಳಿಸಿದರು.

ABOUT THE AUTHOR

...view details