ಚಾಮರಾಜನಗರ:ಕೊರೊನಾ ಸಂಕಷ್ಟದ ಜೊತೆ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವೇಗ ನೀಡಲು ಜಿಲ್ಲಾಡಳಿತ ಹತ್ತು, ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವ ಕುರಿತು ಡಿಸಿ ಡಾ.ಎಂ.ಆರ್.ರವಿ ಫೇಸ್‌ಬುಕ್ ಲೈವ್ ಮೂಲಕ ಮಾಹಿತಿ ನೀಡಿದ್ದಾರೆ.
ರೇಷ್ಮೆ ಸೀರೆಯನ್ನು ಬ್ರಾಂಡ್ ಮಾಡುವುದು, ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ, ಪ್ರವಾಸಿತಾಣಗಳನ್ನು ಪ್ರಮೋಟ್ ಮಾಡುವುದು, ಅನಕ್ಷರಸ್ಥರಿಗೆ ಶಿಕ್ಷಣ ನೀಡುವುದು, ಶತಮಾನ ಕಂಡ ಶಾಲೆಗಳ ಅಭಿವೃದ್ಧಿ, ತಾಲೂಕಿಗೊಂದು ಮಾದರಿ ಸ್ಮಶಾನ ನಿರ್ಮಿಸುವ ಯೋಜನೆಯನ್ನು ಜಿಲ್ಲಾಡಳಿತ ಹಾಕಿಕೊಂಡಿದೆ ಎಂದು ಅವರು ತಿಳಿಸಿದರು.
ರೇಷ್ಮೆ ಬ್ರಾಂಡ್ :
ಒಂದು ಕಾಲದಲ್ಲಿ ರೇಷ್ಮೆಗೆ ಸುಪ್ರಸಿದ್ಧವಾಗಿದ್ದ ಜಿಲ್ಲೆಯನ್ನು ಮತ್ತೇ ಗತವೈಭವಕ್ಕೆ ಕೊಂಡೊಯ್ಯಲು ಕೊಳ್ಳೇಗಾಲ ರೇಷ್ಮೆ ಸೀರೆಯನ್ನು ಬ್ರಾಂಡ್ ಮಾಡಲು ಮುಂದಾಗಿದ್ದು, ಇದಕ್ಕಾಗಿ 9 ನೇಕಾರರ ಸಂಘವನ್ನು ಒಗ್ಗೂಡಿಸಿ ಪುನಶ್ಚೇತನಗೊಳಿಸಿ ಕೊಳ್ಳೇಗಾಲದಲ್ಲಿ ಸೀರೆ ಮಾರಾಟ ಮಳಿಗೆ ತೆರೆಯಲಾಗುವುದು. ರೇಷ್ಮೆ ನೆಚ್ಚಿಕೊಂಡಿರುವ 779 ಕುಟುಂಬಗಳ ಜೀವನ ಸುಧಾರಿಸುವ ಜೊತೆಗೆ ಸಿಲ್ಕ್ ಬ್ರಾಂಡ್ ಮಾಡಲಾಗುವುದು.
ಅಕ್ಷರೋತ್ಸವ:
ಜಿಲ್ಲೆಯ ಶಿಕ್ಷಣವಂತರ ಸಂಖ್ಯೆ ಶೇ.63 ಇದ್ದು, ಉಳಿದ ಶೇ. 37 ರಷ್ಟು ಅನಕ್ಷರಸ್ಥರನ್ನು ಮುಖ್ಯ ವಾಹಿನಿಗೆ ಕರೆತರಲು ಅಕ್ಷರೋತ್ಸಹ ಯೋಜನೆ ರೂಪಿಸಲಾಗಿದೆ. ಕಾಡಂಚಿನ, ಗ್ರಾಮೀಣ ಪ್ರದೇಶದ ಅಶಿಕ್ಷಿತರಿಗೆ ವಿದ್ಯೆ ಕಳುಹಿಸುವ ಮಹತ್ತರ ಯೋಜನೆ ಇದಾಗಿದೆ.
ಯುವಕರಿಗೆ ತರಬೇತಿ: