ಚಾಮರಾಜನಗರ:ಉಸಿರಾಟ ಸಮಸ್ಯೆ, ಅಸ್ತಮಾ, ಜ್ವರ, ನೆಗಡಿ-ಕೆಮ್ಮು ಲಕ್ಷಣದ ರೋಗಿಗಳು ಖಾಸಗಿ ಕ್ಲಿನಿಕ್ ಇಲ್ಲವೇ ಆಸ್ಪತ್ರೆಗೆ ಬಂದರೆ, ಅಂತವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಬೇಕೆಂದು ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.
SARI ಮತ್ತು ILI ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಹೋದರೆ ಕೊರೊನಾ ಟೆಸ್ಟ್ ಮಾಡಿಸಬೇಕಾಗುತ್ತದೆ ಎಂದು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಶುಕ್ರವಾರ ಈ ಆದೇಶ ಹೊರಡಿಸಿದ್ದಾರೆ. SARI ಮತ್ತು ILI ರೋಗಿಗಳಿಗೆ RAT, RT-PCR ಟೆಸ್ಟ್ ನಡೆಸಬೇಕು, 100 ಜನರಿಗಿಂತ ಹೆಚ್ಚು ರೋಗಿಗಳು ಬರುವ ಕ್ಲಿನಿಕ್ಗಳಿಗೆ ಆರೋಗ್ಯ ಇಲಾಖೆಯೇ ತಂಡವನ್ನು ಕಳುಹಿಸಿಕೊಡಲಿದೆ ಎಂದಿದ್ದಾರೆ.
ಈ ಆದೇಶ ಉಲ್ಲಂಘಿಸಿದ ಕ್ಲಿನಿಕ್, ಆಸ್ಪತ್ರೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿರುವ ಡಿಸಿ ಚಾರುಲತಾ ಸೋಮಲ್, ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ಕೊರೊನೇತರ ರೋಗಿಗಳು ಟೆಸ್ಟ್ ತಪ್ಪಿಸಿಕೊಳ್ಳಲು ತೆರಳುತ್ತಿರುವುದರಿಂದ ಈ ಕ್ರಮ ಕೈಗೊಂಡಿದ್ದಾರೆ.