ಚಾಮರಾಜನಗರ : ಮಾದಪ್ಪನ ಬೆಟ್ಟದ ತಪ್ಪಲಿನ ಕೆಲ ಗ್ರಾಮಗಳಲ್ಲಿ ಆಹಾರದ ಉಂಡೆ ಮಾಡಿ ಅದಕ್ಕೆ ಕಚ್ಚಾ ಬಾಂಬ್ ಸೇರಿಸಿ ಬೇಟೆಯಾಡುತ್ತಿರುವ ಗುಮಾನಿ ಬೆಳಕಿಗೆ ಬಂದಿದೆ.
ಕಚ್ಚಾ ಬಾಂಬ್ ಜಗಿದು ಜಾನುವಾರುಗಳ ಸಾವು ಪ್ರಕರಣ.. ಡಿಎಫ್ಒ ಹೇಳಿದ್ದೇನು? - ಚಾಮರಾಜನಗರ ಲೇಟೆಸ್ಟ್ ಸುದ್ದಿ
ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ವಡಕೆಹಳ್ಳದ ಕೆಂಪಮಾದಮ್ಮ ಎಂಬುವರ ಎಮ್ಮೆ ಮೇಯಲು ಹೋಗಿದ್ದ ವೇಳೆ ಕಚ್ಚಾ ಬಾಂಬ್ ಜಗಿದು ಬಾಯಿ ಸ್ಫೋಟಗೊಂಡ ಘಟನೆ ಕಳೆದ ಅಕ್ಟೋಬರ್ 22 ರಂದು ನಡೆದಿದೆ. ಅದಾದ ಬಳಿಕ ಕಳೆದ ಡಿಸೆಂಬರ್ 9 ರಂದು ತೋಕೆರೆ ಗ್ರಾಮದ ಮಾದಯ್ಯನವರ ಹಸುವೂ ಇದೇ ರೀತಿ ಮೃತಪಟ್ಟಿತ್ತು. ಜೋಳದ ಮುದ್ದೆ, ಕಡಲೆ ಹಿಟ್ಟು, ಹುಲ್ಲಿನ ಉಂಡೆಗಳಿಗೆ ಉಪ್ಪು ಸವರಿ ಕಚ್ಚಾ ಬಾಂಬ್ಯಿಟ್ಟು ಜಿಂಕೆ, ಕಡವೆ ಬೇಟೆಯಾಡುತ್ತಿದ್ದಾರೆ ಎನ್ನಲಾಗ್ತಿದೆ.
ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ವಡಕೆಹಳ್ಳದ ಕೆಂಪಮಾದಮ್ಮ ಎಂಬುವರ ಎಮ್ಮೆ ಮೇಯಲು ಹೋಗಿದ್ದ ವೇಳೆ ಕಚ್ಚಾ ಬಾಂಬ್ ಜಗಿದು ಬಾಯಿ ಸ್ಫೋಟಗೊಂಡ ಘಟನೆ ಕಳೆದ ಅಕ್ಟೋಬರ್ 22 ರಂದು ನಡೆದಿದೆ. ಅದಾದ ಬಳಿಕ ಕಳೆದ ಡಿಸೆಂಬರ್ 9 ರಂದು ತೋಕೆರೆ ಗ್ರಾಮದ ಮಾದಯ್ಯನವರ ಹಸುವೂ ಇದೇ ರೀತಿ ಮೃತಪಟ್ಟಿತ್ತು.
ತನಿಖಾ ತಂಡ ರಚನೆ:ಈ ದುಷ್ಕೃತ್ಯಗಳ ಕುರಿತು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕುಂಡಲು ಪ್ರತಿಕ್ರಿಯಿಸಿದ್ದು, ವನ್ಯಜೀವಿಗಳ ಬೇಟೆಯಾಡಲು ಆಹಾರದಲ್ಲಿ ಸ್ಫೋಟಕ ಇಡಲಾಗಿತ್ತೇ ಅಥವಾ ಬೆಳೆಗಳ ರಕ್ಷಣೆಗಾಗಿ ಸ್ಥಳೀಯರೇ ಸಿಡಿಮದ್ದನ್ನು ಮೇವಿನಲ್ಲಿ ಹುದುಗಿಸಿಟ್ಟಿದ್ದರೇ ಎಂಬುದು ಈವರೆಗೂ ತಿಳಿದು ಬಂದಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಸ್ಥಳೀಯರು ಸಹ ದೂರು ನೀಡಿಲ್ಲ. ಘಟನೆ ಕುರಿತು ತಡವಾಗಿ ಗಮನಕ್ಕೆ ಬಂದಿದೆ. ರೈತರು ಜಾನುವಾರು ಕಳೆದುಕೊಂಡಿರುವುದು ನೋವುಂಟು ಮಾಡಿದೆ. ವನ್ಯಜೀವಿಗಳನ್ನು ಬೇಟೆಯಾಡಲು ಈ ರೀತಿ ಆಹಾರದಲ್ಲಿ ಸಿಡಿಮದ್ದು ಇಡಲಾಗುತ್ತಿದೆ. ಸೂಕ್ಷ್ಮ ಗ್ರಹಿಕೆಯ ವನ್ಯಜೀವಿಗಳು ಇದನ್ನು ತಿನ್ನುವುದಿಲ್ಲ. ಜಾನುವಾರುಗಳು ತಿಂದು ಈ ರೀತಿ ಅವಘಡ ಸಂಭವಿಸಿದೆ. ಈ ಕುರಿತು ಈಗಾಗಲೇ ತನಿಖಾ ತಂಡ ರಚಿಸಲಾಗಿದ್ದು, ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.