ಕರ್ನಾಟಕ

karnataka

ETV Bharat / state

ದೀಪಾವಳಿ, ಸಂಕ್ರಾಂತಿಗೆ ಗೋವು ಪೂಜಿಸ್ತೀರಿ ಮತ್ ಕಟ್ ಯಾಕ್ ಮಾಡ್ತೀರಿ: ಸಚಿವ ಪ್ರಭು ಚವ್ಹಾಣ್ ಪ್ರಶ್ನೆ - 19 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ

ಒಂದು ವರ್ಷ ಸಮಯ ಕೊಡಿ ಗೋಮೂತ್ರ, ಸಗಣಿ ಹಾಗೂ ಇತರ ಗೋ ಉತ್ಪನ್ನಗಳು ಹೇಗೆ ಲಾಭದಾಯಕ ಎಂದು ತೋರಿಸುತ್ತೇನೆ‌. ಹತ್ಯೆ ಮಾಡುವುದರಿಂದ ಏನು ಸಿಗದು, ಈಗಾಗಲೇ 19 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವಾಗಿದೆ, ಈ ಕಾಯ್ದೆಯಿಂದ ರೈತರಿಗೆ ಲಾಭವಿದೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದರು.

ಪ್ರಭು ಚವ್ಹಾಣ್
ಪ್ರಭು ಚವ್ಹಾಣ್

By

Published : Feb 17, 2021, 1:38 PM IST

ಚಾಮರಾಜನಗರ:ದೀಪಾವಳಿ, ಸಂಕ್ರಾಂತಿಗೆ ಗೋವುಗಳನ್ನ ಪೂಜಿಸುತ್ತೀರಿ ಮತ್ ಕಟ್ ಯಾಕ್ ಮಾಡ್ತೀರಿ..? ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಗೋಹತ್ಯೆ ನಿಷೇಧ ಮಸೂದೆ ಕುರಿತು ಅವರು ಮಾತನಾಡಿ, ಕಾಯ್ದೆಯಲ್ಲಿ ಯಾವುದೇ ವಿವಾದ ಇಲ್ಲ, ಒಂದು ವರ್ಷ ಸಮಯ ಕೊಡಿ ಗೋಮೂತ್ರ, ಸಗಣಿ ಹಾಗೂ ಇತರ ಗೋ ಉತ್ಪನ್ನಗಳು ಹೇಗೆ ಲಾಭದಾಯಕ ಎಂದು ತೋರಿಸುತ್ತೇನೆ‌. ಹತ್ಯೆ ಮಾಡುವುದರಿಂದ ಏನು ಸಿಗದು, ಈಗಾಗಲೇ 19 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವಾಗಿದೆ, ಈ ಕಾಯ್ದೆಯಿಂದ ರೈತರಿಗೆ ಲಾಭವಿದೆ ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಭು ಚವ್ಹಾಣ್​

ರಾಮಮಂದಿರಕ್ಕೆ ಹಣ ಕೊಡಲ್ಲವೆಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕೊಡಲ್ಲ ಅಂತಾರೆ ಅವರ ಮಗ ದೇಣಿಗೆ ಕೊಟ್ಟಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಣ ಪಡೆದಿರುವ ಲೆಕ್ಕ ಪಾರದರ್ಶಕವಾಗಿದ್ದು, ಪ್ರತಿಯೊಂದಕ್ಕೂ ಲೆಕ್ಕ ಕೊಡುತ್ತೇವೆ ಎಂದರು‌.

ಇದನ್ನೂ ಓದಿ.. ಕೊರೊನಾ ಬಗ್ಗೆ ಸರ್ಕಾರ ನಿರ್ಲಕ್ಷ್ಯ, ಅತಿಯಾದ ವಿಶ್ವಾಸ ಹೊಂದಿದೆ: ರಾಹುಲ್ ಗಾಂಧಿ ನೇರಾರೋಪ

ದೇಣಿಗೆ ಕೊಡದ ಮನೆಗಳನ್ನು ಗುರುತು ಮಾಡಿಕೊಳ್ಳಲಾಗುತ್ತಿದೆ ಎಂಬ ಎಚ್​ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ವಿಪಕ್ಷಗಳ ಕೆಲಸವೇ ವಿರೋಧಿಸುವುದು, ಅವರು ಬರೀ ಸುಳ್ಳು ಹೇಳಿದ್ದಾರೆ, ಅವರು ವಿರೋಧಿಸಲಿ ನಾವು ಕೆಲಸ ಮಾಡುತ್ತೇವೆ ಎಂದರು.

ABOUT THE AUTHOR

...view details