ಚಾಮರಾಜನಗರ (ಕೊಳ್ಳೇಗಾಲ): ದೇಶದಲ್ಲಿ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆ ಕೊಳ್ಳೇಗಾಲ ಸಮೀಪದ ಸತ್ತೇಗಾಲ ಚೆಕ್ಪೋಸ್ಟ್ನಲ್ಲಿ ವಾಹನಗಳಿಗೆ ಔಷಧ ಸಿಂಪಡಣೆ ಮಾಡಿದ ಬಳಿಕ ಗಡಿಯಿಂದ ಒಳಗೆ ಬಿಡುವ ಕಾರ್ಯ ಮಾಡಲಾಗ್ತಿದೆ.
ಕೊರೊನಾ ಭೀತಿ: ಜಿಲ್ಲೆಗೆ ಆಗಮಿಸುವ ವಾಹನಗಳಿಗೆ ಔಷಧ ಸಿಂಪಡಣೆ - chamaraja nagara
ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ಸತ್ತೇಗಾಲ ಗಡಿ ಚೆಕ್ಪೋಸ್ಟ್ನಿಂದ ಒಳಬರುವ ವಾಹನಗಳಿಗೆ ಔಷಧ ಸಿಂಪಡಿಸಲಾಗುತ್ತಿದೆ. ಬೆಂಗಳೂರು, ಮಂಡ್ಯ ಹಾಗೂ ಮಳವಳ್ಳಿಯಿಂದ ಬರುವ ಪ್ರತಿ ವಾಹನಗಳಿಗೆ ಔಷಧ ಸಿಂಪಡಿಸುವುದರ ಜೊತೆ ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ಕಂದಾಯ ಇಲಾಖೆಯ ಶ್ರೀಧರ್ ತಿಳಿಸಿದ್ದಾರೆ. ಅಗತ್ಯ ಸರಕು ಸಾಗಣೆ ಮಾಡುವ ಚಾಲಕರು ಹಾಗೂ ಇನ್ನಿತರ ಕೆಲಸಗಳಿಗೆ ಬರುವ ವ್ಯಕ್ತಿಗಳ ಮೇಲು ನಿಗಾ ವಹಿಸಲಾಗಿದ್ದು ದೇಹದ ಉಷ್ಣತೆ ಪರೀಕ್ಷಿಸಲಾಗುತ್ತಿದೆ.
ಕೊರೊನಾ ಭೀತಿ: ಜಿಲ್ಲೆಗೆ ಆಗಮಿಸುವ ವಾಹನಗಳಿಗೆ ಔಷಧಿ ಸಿಂಪಡಣೆ
ಹಾಗೆಯೇ ಜಿಲ್ಲೆಯ ಸಮೀಪದಲ್ಲಿರುವ ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ಸತ್ತೇಗಾಲ ಗಡಿ ಚೆಕ್ಪೋಸ್ಟ್ನಿಂದ ಒಳಬರುವ ವಾಹನಗಳಿಗೆ ಔಷಧ ಸಿಂಪಡಿಸಲಾಗುತ್ತಿದೆ. ಬೆಂಗಳೂರು, ಮಂಡ್ಯ ಹಾಗೂ ಮಳವಳ್ಳಿಯಿಂದ ಬರುವ ಪ್ರತಿ ವಾಹನಗಳಿಗೆ ಔಷಧ ಸಿಂಪಡಿಸುವುದರ ಜೊತೆ ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ಕಂದಾಯ ಇಲಾಖೆಯ ಶ್ರೀಧರ್ ತಿಳಿಸಿದ್ದಾರೆ.
ಅಗತ್ಯ ಸರಕು ಸಾಗಣೆ ಮಾಡುವ ಚಾಲಕರು ಹಾಗೂ ಇನ್ನಿತರ ಕೆಲಸಗಳಿಗೆ ಬರುವ ವ್ಯಕ್ತಿಗಳ ಮೇಲು ನಿಗಾ ವಹಿಸಲಾಗಿದ್ದು ದೇಹದ ಉಷ್ಣತೆಯನ್ನು ಪರೀಕ್ಷಿಸಲಾಗುತ್ತಿದೆ.