ಗುಂಡ್ಲುಪೇಟೆ: ಕೊರೊನಾ ಮಾಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಶಿಂಡನಪುರ ಗ್ರಾಮಸ್ಥರು ಬೇರೆ ಸ್ಥಳೀಯರನ್ನು ಹೊರತುಪಡಿಸಿ ಬೇರೆಯವರಿಗೆ ಗ್ರಾಮದ ಒಳಗೆ ಪ್ರವೇಶ ಇಲ್ಲ ಎಂದು ರಸ್ತೆ ಬಂದ್ ಮಾಡಿದ್ದಾರೆ.
ಕೊರೊನಾ ಎಫೆಕ್ಟ್..ಈ ಗ್ರಾಮಕ್ಕೆ ನೋ ಅಂದರ್, ನೋ ಬಾಹರ್ ...! - ಕೊರೊನಾ ಸುದ್ದಿ
ಕೊರೊನಾ ಸೋಂಕಿನಿಂದ ಪಾರಾಗಲು ಶಿಂಡನಪುರ ಗ್ರಾಮಸ್ಥರು ಸ್ವ ಇಚ್ಚೆಯಿಂದ ತಮ್ಮ ಗ್ರಾಮಕ್ಕೆ ಬೇರೆಯವರು ಬರದಂತೆ ರಸ್ತೆ ಬಂದ್ ಮಾಡಿದ್ದಾರೆ.
ಕೊರೊನಾ ಎಫೆಕ್ಟ್..ಈ ಗ್ರಾಮಕ್ಕೆ ನೋ ಅಂದರ್ ನೋ ಬಾಹರ್ ...!
ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ್ದರೂ ಜನರು ಹೊರಗೆ ಬರುವುದನ್ನು ನಿಲ್ಲಿಸುತ್ತಿಲ್ಲ. ಆದ್ದರಿಂದ ಗ್ರಾಮದಲ್ಲಿ ಇಂತಹ ನಿರ್ಧಾರ ಮಾಡಿದ್ದೇವೆ. ಈ ಸೋಂಕಿನಿಂದ ಪಾರಾಗಲು ಎಲ್ಲರೂ ಸಹಕಾರ ಮುಖ್ಯ. ಹಾಗಾಗಿ ಹೊರಗೆ ಬರಬಾರದು ಎಂದು ಗ್ರಾಮದ ಮುಖಂಡರು ಮನವಿ ಮಾಡಿದ್ದಾರೆ.
ಈ ರಸ್ತೆ ಬಂದ್ ಮಾಡಿರುವ ಕಾರಣ ಅನೇಕ ಪಟ್ಟಣ ಪ್ರದೇಶಗಳಿಗೆ ಹೋಗುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಎಲ್ಲಾ ಗ್ರಾಮದಲ್ಲಿ ಈ ಕೆಲಸ ಮುಂದುವರೆದರೆ ಸ್ವಯಂ ಬಂದ್ ಆದಾಂತೆ ಆಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.