ಚಾಮರಾಜನಗರ:ಕಾಂಗ್ರೆಸ್ ಪಕ್ಷದವರ ಓಲೈಕೆ ರಾಜಕಾರಣದಿಂದಾಗಿ ಗಲಭೆ, ಭಯೋತ್ಪಾದನೆಗಳಂಥ ದೇಶದ್ರೋಹಿ ಚಟುವಟಿಕೆ ಶುರುವಾಗಿವೆ ಎಂದು ಶ್ರೀರಾಮಸೇನೆ ರಾಷ್ಟೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಒಲೈಕೆ ರಾಜಕಾರಣದಿಂದ ಭಯೋತ್ಪಾದಕತೆ ಅಗಾಧವಾಗಿ ಬೆಳೆದಿದೆ. ಬೇಕಾದರೆ ದಾಖಲೆ ಸಮೇತ ಸಾಬೀತು ಪಡಿಸುವೆ. ದೇಶದ್ರೋಹಿ ಚಟುವಟಿಕೆಗೆ ಮೈಸೂರು ಪ್ರಯೋಗಶಾಲೆಯಾಗಿ ಬದಲಾಗಿದೆ. ಪಿಎಫ್ಐ ನಿಷೇಧವಿದ್ದರೂ, ಅದೇ ಮಾನಸಿಕ ಸ್ಥಿತಿಯಲ್ಲಿ ಸಾವಿರಾರು ಮಂದಿ ಇನ್ನೂ ಇದ್ದಾರೆ ಎಂದು ಕಿಡಿಕಾರಿದರು.
ಹಿಂದೂಯೇತರರಿಗೆ ವ್ಯಾಪಾರಕ್ಕೆ ಅನುಮತಿ ಬೇಡ : ಸುಬ್ರಹ್ಮಣ್ಯ ದೇವಾಲಯ ಆವರಣದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕೊಡದಿರುವ ನಿರ್ಧಾರ ಸ್ವಾಗತಾರ್ಹ. ಈ ದೇಶದಲ್ಲಿದ್ದು ಇಲ್ಲಿನ ಸವಲತ್ತು ಪಡೆದು ದೇಶದ್ರೋಹಿ ಚಟುವಟಿಕೆ ನಡೆಸುವ ಕಿಡಿಗೇಡಿಗಳು, ಭಯೋತ್ಪಾದಕರಿಂದಾಗಿ ಈ ನಿರ್ಬಂಧ ತರುವುದು ಸೂಕ್ತ ಎನ್ನುವುದನ್ನು ಮೌಲ್ವಿಗಳು, ಮುಲ್ಲಾಗಳು ಅರಿಯಬೇಕು. ಭಯೋತ್ಪಾದಕ ಮನಸ್ಥಿತಿ ವಿರುದ್ಧ ರಾಜ್ಯದ ಎಲ್ಲ ದೇವಾಲಯಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ, ಪ್ರವೇಶ ನಿರ್ಬಂಧಿಸಬೇಕು ಎಂದು ಒತ್ತಾಯಿಸಿದರು.