ಚಾಮರಾಜನಗರ:ಈಚೆಗೆ ನಿಧನರಾದ ಡಿಸಿಎಫ್ ಪಿ.ಶ್ರೀನಿವಾಸ್ ಅವರ ತಾಯಿ ಜಯಲಕ್ಷ್ಮಿ ಅವರಿಗೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು.
ಕಾಡುಗಳ್ಳ ಮರೆಗೆ, ಸಾಹೇಬರು ಮನೆ-ಮನೆಗೆ: ಡಿಸಿಎಫ್ ಶ್ರೀನಿವಾಸ್ ತಾಯಿ ನಿಧನಕ್ಕೆ ಕಂಬನಿ - Koose Munisamy Veerappan Goundar
ಹನೂರು ತಾಲೂಕಿನ ಗೋಪಿನಾಥಂ ಗ್ರಾಮದ ಮಾರಿಯಮ್ಮ ದೇಗುಲ ಆವರಣದಲ್ಲಿ ಗ್ರಾಮಸ್ಥರು, ನಿಧನರಾದ ಡಿಸಿಎಫ್ ಪಿ.ಶ್ರೀನಿವಾಸ್ ಅವರ ತಾಯಿ ಜಯಲಕ್ಷ್ಮಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಡಿಸಿಎಫ್ ಶ್ರೀನಿವಾಸ್ ತಾಯಿ ನಿಧನಕ್ಕೆ ಕಂಬನಿ
ಮಾರಿಯಮ್ಮ ದೇಗುಲ ಆವರಣದಲ್ಲಿ ಗ್ರಾಮದ ಮುಖಂಡರು, ಮಹಿಳೆಯರು ಜಯಲಕ್ಷ್ಮಿ ಮತ್ತು ಪಿ.ಶ್ರೀನಿವಾಸ್ ಅವರನ್ನೊಳಗೊಂಡ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಂಬನಿ ಮಿಡಿದರು. ವೀರಪ್ಪನ್ ಅಟ್ಟಹಾಸದ ನಡುವೆ ತಮಗೆಲ್ಲ ಜೀವನ ಕಟ್ಟಿಕೊಟ್ಟ ಶ್ರೀನಿವಾಸ್ ಅವರನ್ನು ಇದೇ ವೇಳೆ ಗ್ರಾಮಸ್ಥರು ನೆನೆದರು.
ದಂತಚೋರ ವೀರಪ್ಪನ್ ಸತ್ತು 16 ವರ್ಷಗಳಾಗುತ್ತಾ ಬರುತ್ತಿದ್ದು, ಗ್ರಾಮಸ್ಥರ ನೆನಪಿನ ಬುತ್ತಿಯಿಂದ ಆತ ಕ್ರಮೇಣ ಮರೆಯಾಗುತ್ತಿದ್ದಾನೆ. ಆದರೆ, ಸಾಹೇಬರು ಎಂದು ಕರೆಯಿಸಿಕೊಳ್ಳುವ ಡಿಸಿಎಫ್ ಶ್ರೀನಿವಾಸ್ ಕಾಲವಾಗಿ 29 ವರ್ಷವಾದರೂ ಇಂದಿಗೂ ಅವರು ಅಜರಾಮರರಾಗಿದ್ದಾರೆ.