ಕರ್ನಾಟಕ

karnataka

ETV Bharat / state

ಸಮಯಕ್ಕೆ ಸಿಗದ ಆರೋಗ್ಯ ಸೇವೆ: ಪ್ರಸವ ವೇದನೆಯಲ್ಲಿ ಮಗು ಸಾವು - ಆರೋಗ್ಯ ಸಂಚಾರಿ ಘಟಕ

ಪ್ರಸವ ವೇದನೆಯಿಂದ ಹೆರಿಗೆ ವೇಳೆ ಮಗುವೊಂದು ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕೊಂಬುಡಿಕ್ಕಿಯಲ್ಲಿ ನಡೆದಿದೆ.

ಸಮಯಕ್ಕೆ ಸಿಗದ ಆರೋಗ್ಯ ಸೇವೆ: ಪ್ರಸವ ವೇದನೆಯಲ್ಲಿ ಮಗು ಸಾವು

By

Published : Aug 30, 2019, 11:50 PM IST

ಚಾಮರಾಜನಗರ: ಪ್ರಸವ ವೇದನೆಯಿಂದ ಹೆರಿಗೆ ವೇಳೆ ಮಗುವೊಂದು ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕೊಂಬುಡಿಕ್ಕಿಯಲ್ಲಿ ನಡೆದಿದೆ.

ಗ್ರಾಮದ ಗಿರಿಜನ ಮಹಿಳೆ ಪುಟ್ಟಿ (26) ಎಂಬುವವರು ಪ್ರಸವದ ವೇಳೆ ತನ್ನ ಮಗುವನ್ನು ಕಳೆದುಕೊಂಡ ನತದೃಷ್ಟೆ. ಮಹದೇಶ್ವರ ಬೆಟ್ಚ ಪಂಚಾಯ್ತಿ ವ್ಯಾಪ್ತಿಗೆ ಈ ಗ್ರಾಮ ಒಳಪಡಲಿದ್ದು ,ಯಾವುದೇ ಕಾರಣಕ್ಕೂ ಮನೆಯಲ್ಲಿ ಹೆರಿಗೆ ಆಗಬಾರದು ಎಂಬ ಉದ್ದೇಶದಿಂದ ಸರ್ಕಾರದಿಂದ ಹಲವು ಯೋಜನೆಗಳಿದ್ದರೂ ಈ ಗ್ರಾಮಕ್ಕೆ ಅಂಗನವಾಡಿ ಕಾರ್ಯ ಕರ್ತೆ ಮತ್ತು ಆಶಾ ಕಾರ್ಯಕರ್ತೆಯರು ಇಲ್ಲದಿದ್ದರಿಂದ ಈ ಅವಗಡ ಆಗಿದೆ.

ಸಮಯಕ್ಕೆ ಸಿಗದ ಆರೋಗ್ಯ ಸೇವೆ: ಪ್ರಸವ ವೇದನೆಯಲ್ಲಿ ಮಗು ಸಾವು
ಪ್ರತಿ ವಾರದಂತೆ ಇಂದು ಆರೋಗ್ಯ ಸಂಚಾರಿ ಘಟಕದ ಸಿಬ್ಬಂದಿಗಳು ತೆರಳಿದ ಮೇಲೆ ವಿಚಾರ ಬೆಳಕಿಗೆ ಬಂದಿದ್ದು, ಕೂಡಲೇ ಸಂಚಾರಿ ಘಟಕದಲ್ಲೆ ಬಾಣಂತಿಯನ್ನು ಸುರಕ್ಷಿತವಾಗಿ ಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಇದಕ್ಕೂ ಮುನ್ನ ಪ್ರಸವ ವೇದನೆ ವೇಳೆ ತಾಯಿ ಪ್ರಜ್ಞಾಹೀನರಾಗಿದ್ದರು ಎನ್ನಲಾಗಿದೆ. ಇನ್ನು, ಈ ಕುರಿತು ಮಲೆಮಹದೇಶ್ವರ ಬೆಟ್ಟದ ವೈದ್ಯಾಧಿಕಾರಿ ಪ್ರತಿಕ್ರಿಯಿಸಿ, ಪುಟ್ಟಿ ಎಂಬಾಕೆಯನ್ನು ಉದ್ಬವ್ ಸಂಸ್ಥೆಯ ಸಂಚಾರಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಕರೆತಂದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಆ್ಯಂಬುಲೆನ್ಸ್ ಗೆ ಕರೆ ಮಾಡಲಾಗಿದ್ದು, ವಾಹನ ಬರುವ ಮುನ್ನ ಅವರಿಗೆ ಹೆರಿಗೆಯಾಗಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೇ ಈ ಹಿಂದೆ ಪುಟ್ಟಿಗೆ ಮಾತ್ರೆ ಹಾಗೂ ಇಂಜಕ್ಷನ್ ನೀಡಿ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಇದು ಆಕೆಗೆ ನಾಲ್ಕನೆ ಮಗು.ಈಗಾಗಲೇ 2ಗಂಡು ಹಾಗೂ 1ಹೆಣ್ಣು ಮಗು ಚೆನ್ನಾಗಿದೆ. ಆಕೆ ಆಗಿಂದಾಗ್ಗೆ ತಪಾಸಣೆ ವಿಚಾರದಲ್ಲಿ ನಿಲ೯ಕ್ಷ್ಯ ವಹಿಸಿದ್ದ ಹಿನ್ನೆಲೆ ನಾಲ್ಕನೆ ಮಗು ಹೊಟ್ಟೆಯಲ್ಲೆ ಸಾವಿಗೀಡಾಗಿದೆ. ಬಾಣಂತಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಆಕೆಗೆ ಯಾವುದೆ ಪ್ರಾಣಾಪಾಯವಿಲ್ಲ ಎಂದಿದ್ದಾರೆ.

ABOUT THE AUTHOR

...view details