ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ 'ಯುವರತ್ನ' ಚಿತ್ರಕ್ಕೆ ಚಾಮರಾಜನಗರ, ಕೊಳ್ಳೇಗಾಲದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಅಭಿಮಾನಿಗಳು ಥಿಯೇಟರ್ ಮುಂದೆ ಹುಚ್ಚೆದ್ದು ಕುಣಿದಿದ್ದಾರೆ.
ಚಾಮರಾಜನಗರದ ಬಸವೇಶ್ವರ ಚಿತ್ರಮಂದಿರದ ಮುಂದೆ 50 ಅಡಿ ಕಟೌಟ್ ನಿಲ್ಲಿಸಿರುವ ಅಭಿಮಾನಿಗಳು, ಇಡೀ ಚಿತ್ರಮಂದಿರವೇ ಮುಚ್ಚಿಕೊಳ್ಳುವಂತೆ ಫ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟಿದ್ದಾರೆ. ಇದರೊಟ್ಟಿಗೆ ದೀಪಾಲಂಕಾರವನ್ನು ಮಾಡಿ ಗಮನ ಸೆಳೆದಿದ್ದಾರೆ.