ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಉತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೋಡುಗಳಲ್ಲಿ ಮಳೆಗಾಲದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಕತ್ತೆಕಾಲು ಪೋಡು ಹಾಗೂ ಹಿರಿಹಂಬಲ ಪೋಡುಗಳಲ್ಲಿ ಕಳೆದ 6 ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಇದರಿಂದಾಗಿ ಸ್ಥಳೀಯರು 2 ಕಿ.ಮೀ ದೂರದ ಕಾಡು ಹಾದಿಯಲ್ಲಿ ನಡೆದು ಹೋಗಿ ಕೆರೆಯ ನೀರನ್ನ ಹೊತ್ತು ತರುತ್ತಿದ್ದಾರೆ.
ಪೋಡಿನಲ್ಲಿ ನೀರು ಎತ್ತುವ ಮೋಟಾರ್ ಸುಟ್ಟು ಹೋಗಿದೆ ಎಂದು ಸಬೂಬು ಹೇಳಿಕೊಂಡು ರಿಪೇರಿ ಮಾಡಿಸದ ಪರಿಣಾಮ ಕಾಡಿನೊಳಗೆ ನಡೆದು ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ.