ಚಾಮರಾಜನಗರ:ಪ್ರವಾಸಿಗರ ಕಣ್ಮಣಿಯಾಗಿದ್ದ ಬಂಡೀಪುರದ ಪ್ರಿನ್ಸ್ ಹುಲಿಯಂತೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿಯೊಂದು ಪ್ರವಾಸಿಗರಿಗೆ, ಭಕ್ತರಿಗೆ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ.
ಬೆಟ್ಟದ ಹುಲಿ : ಬಂಡೀಪುರದ ಪ್ರಿನ್ಸ್ ರೀತಿ ಗೋಪಾಲಸ್ವಾಮಿ ಬೆಟ್ಟದಲ್ಲಿ ಸತತವಾಗಿ ವ್ಯಾಘ್ರ ದರ್ಶನ! - ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬಳಿ ಹಲವು ಬಾರಿ ಹುಲಿ ಕಾಣಿಸಿಕೊಳ್ಳುತ್ತಿದ್ದು, ಈ ಬೆಟ್ಟದ ಹುಲಿ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗುತ್ತಿದೆ.
ಕೆಎಸ್ಆರ್ಟಿಸಿ ಬಸ್ ಮೂಲಕ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಹುಲಿಯೊಂದು ಗುಡ್ಡದ ಮೇಲೆ ನಿಂತಿರುವುದನ್ನು ಪ್ರವಾಸಿಗರು ಕಂಡು ಪುಳಕಿತರಾಗಿದ್ದಾರೆ. ಸಾರಿಗೆ ಸಂಸ್ಥೆ ಸಿಬ್ಬಂದಿ ಪ್ರಕಾಶ್ ಎಂಬವರು ಹುಲಿ ಓಡಾಟದ ವಿಡಿಯೋ ಸೆರೆಹಿಡಿದಿದ್ದು, ಇದು ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಈ ಹಿಂದೆಯೂ ಕೂಡ ಕಟ್ಟೆಯ ಮೇಲೆ, ರಸ್ತೆ ಮಧ್ಯೆ ಕುಳಿತಿ ಮತ್ತು ರಸ್ತೆ ದಾಟುವ ವೇಳೆ ಪ್ರವಾಸಿಗರಿಗೆ ದರ್ಶನ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಬೆಟ್ಟದ ಹುಲಿ ಜನಪ್ರಿಯವಾಗುತ್ತಿದೆ. ಈ ಹುಲಿಗೆ ಅಂದಾಜು 6-7 ವರ್ಷಗಳಾಗಿದ್ದು, ಬೆಟ್ಟದ ಸುತ್ತಮುತ್ತಲು ತನ್ನ ಸರಹದ್ದನ್ನು ರೂಪಿಸಿಕೊಂಡಿದೆ ಎನ್ನಲಾಗ್ತಿದೆ.