ಚಾಮರಾಜನಗರ: ಗುರುವಾರ ಪ್ರಕಟಗೊಂಡ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಚಾಮರಾಜನಗರ ಜಿಲ್ಲೆಯ ಐವರು ವಿದ್ಯಾರ್ಥಿನಿಯರು 625ಕ್ಕೆ 621 ಅಂಕ ಪಡೆದಿದ್ದಾರೆ. ಗುಂಡ್ಲುಪೇಟೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಅನುಷಾ, ಆದರ್ಶ ವಿದ್ಯಾಲಯದ ಸಿಂಚನಾ, ಕೊಳ್ಳೇಗಾಲ ಆದರ್ಶ ವಿದ್ಯಾಲಯದ ಕೆ.ಎನ್. ದೇವಿ, ಚಾಮರಾಜನಗರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪಾರ್ವತಮ್ಮ ಹಾಗೂ ಮರಿಯಾಲದ ಮುರುಘ ರಾಜೇಂದ್ರ ಶಾಲೆಯ ಸ್ಫೂರ್ತಿ ಎಂಬ ವಿದ್ಯಾರ್ಥಿನಿಯರು ಜಿಲ್ಲೆಗೆ ಟಾಪರ್ ಆಗಿದ್ದಾರೆ.
ಉಳಿದಂತೆ 7 ಮಂದಿ 620 ಅಂಕಗಳನ್ನು ತೆಗೆದುಕೊಳ್ಳುವ ಮೂಲಕ ಜಿಲ್ಲೆಗೆ ಸೆಕೆಂಡ್ ಟಾಪರ್ ಆಗಿದ್ದಾರೆ. ಕೊರೊನಾ ಕಾಲ ಹೊರತುಪಡಿಸಿದರೇ ಇದು ಅತ್ಯಂತ ಹೆಚ್ಚಿನ ಫಲಿತಾಂಶವಾಗಿದೆ. ಶೇ. 92.13 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪರೀಕ್ಷೆಗೆ 11,547 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 10,638 ಮಂದಿ ಉತ್ತೀರ್ಣರಾಗಿದ್ದಾರೆ.