ಕರ್ನಾಟಕ

karnataka

ETV Bharat / state

ಸೆ. 27 ರಿಂದ 30 ರ ವರೆಗೆ ಚಾಮರಾಜನಗರ ದಸರಾ: ಅದ್ಧೂರಿ ಆಚರಣೆಗೆ ಸಚಿವ ಸೋಮಣ್ಣ ಸೂಚನೆ - dasara cultural programme

ಚಾಮರಾಜನಗರ ಜಿಲ್ಲೆಯಲ್ಲಿ ಇದೇ 27 ರಿಂದ 30ರ ವರೆಗೆ 4 ದಿನಗಳ ಕಾಲ ಅದ್ಧೂರಿ ಹಾಗೂ ವೈವಿಧ್ಯಮಯ ದಸರಾ ಮಹೋತ್ಸವ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

chamarajanagar dasara preparation
ಸಚಿವ ಸೋಮಣ್ಣ

By

Published : Sep 22, 2022, 12:58 PM IST

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವವನ್ನು ಇದೇ 27 ರಿಂದ 30ರ ವರೆಗೆ 4 ದಿನಗಳ ಕಾಲ ಅದ್ಧೂರಿ ಹಾಗೂ ವೈವಿಧ್ಯಮಯವಾಗಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯ ಸಮಿತಿ ಸಭಾಂಗಣದಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಸಂಬಂಧ ಜಿಲ್ಲೆಯ ಶಾಸಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಲ್ಲಿ ದಸರಾ ಅದ್ಧೂರಿ ಆಚರಣೆಗೆ ಸಾಧ್ಯವಾಗಿರಲಿಲ್ಲ. ಐತಿಹಾಸಿಕ ಪರಂಪರೆ ಹಿನ್ನೆಲೆ ದಸರಾ ಮಹೋತ್ಸವವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ. ಈ ಉದ್ದೇಶದಿಂದ ಜಿಲ್ಲೆಯಲ್ಲಿ ದಸರಾ ಮಹೋತ್ಸವವನ್ನು ಹೆಚ್ಚು ವಿಜೃಂಭಣೆಯಿಂದ ನಡೆಸಬೇಕು ಎಂದರು.

ಇದನ್ನೂ ಓದಿ:ಮೈಸೂರು ದಸರಾ 2022: ಪ್ರವಾಸಿಗರಿಗಾಗಿ ಕಾಂಬೋ ಟಿಕೆಟ್ ವ್ಯವಸ್ಥೆ ಜಾರಿ

ನಗರದ ಚಾಮರಾಜೇಶ್ವರ ದೇವಾಲಯದ ಬಳಿ ದಸರಾ ಮಹೋತ್ಸವದ ಪ್ರಧಾನ ವೇದಿಕೆ ಅಚ್ಚುಕಟ್ಟಾಗಿ ಹಾಗೂ ವೈಭವಯುತವಾಗಿ ಇರಬೇಕು. ಈ ಬಾರಿ ದೀಪಾಲಂಕಾರ ವಿಶೇಷವಾಗಿ ಆಗಬೇಕು. ಸರ್ಕಾರಿ ಕಟ್ಟಡಗಳು, ಪ್ರಮುಖ ವೃತ್ತಗಳು, ರಸ್ತೆಗಳು, ಇತರೆ ಕಡೆಗಳಲ್ಲಿಯೂ ಜಗಮಗಿಸುವ ದೀಪಾಲಂಕಾರ ಮಾಡಬೇಕು. ಜಿಲ್ಲಾ ಕೇಂದ್ರದ ಎಲ್ಲಾ ದಿಕ್ಕಿನ ಪ್ರವೇಶ ದ್ವಾರಗಳಲ್ಲಿ ಸ್ವಾಗತ ಕಮಾನುಗಳು ದೀಪಾಲಂಕಾರದಿಂದ ಕೂಡಿರಬೇಕು. ತಾಲೂಕು ಕೇಂದ್ರಗಳಲ್ಲಿಯೂ ಸಹ ಗ್ರಾಮೀಣ ದಸರಾ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ದೀಪಾಲಂಕಾರ ಆಗಬೇಕು. ಜಿಲ್ಲೆಯ ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಕಳೆಗಟ್ಟಬೇಕು ಎಂದು ಸಚಿವರು ಸೆಸ್ಕಂ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದರು.

ಇದನ್ನೂ ಓದಿ:ರಾಷ್ಟ್ರಪತಿಯಿಂದ ಮೈಸೂರು ದಸರಾ ಉದ್ಘಾಟನೆ.. ಅಪ್ಪುಗೆ ಯುವ ದಸರಾ ಮೀಸಲು

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ಮೂಡಿಬರಬೇಕು. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಬೇಕು. ಹೊರ ಭಾಗದ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮಗಳು ಅದ್ಧೂರಿಯಾಗಿ ಪ್ರಸ್ತುತಪಡಿಸುವಂತಾಗಬೇಕು. ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಪ್ರಾಧಾನ್ಯತೆ ನೀಡಿ ಉತ್ತಮವಾಗಿ ದಸರಾ ಕಾರ್ಯಕ್ರಮಗಳು ನಡೆಯುವಂತೆ ನೋಡಿಕೊಳ್ಳಬೇಕು. ಹನೂರು, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳಲ್ಲಿಯೂ ದಸರಾ ಆಚರಣೆ ವಿಜೃಂಭಣೆಯಿಂದ ನಡೆಯುವಂತಾಗಬೇಕು ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:ರಾಷ್ಟ್ರಪತಿ ದಸರಾ ಉದ್ಘಾಟಿಸುತ್ತಿರುವುದು ಹೆಮ್ಮೆಯ ವಿಚಾರ: ಯದುವೀರ್

ABOUT THE AUTHOR

...view details