ಚಾಮರಾಜನಗರ :ಕುದೇರಿನಲ್ಲಿ ಇತ್ತೀಚೆಗೆ ನಡೆದ ಸರಗಳ್ಳತನ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿಂದು ಮತ್ತೊಂದು ಕಳ್ಳತನ ಪ್ರಕರಣ ನಡೆದಿದೆ. ಮಹಿಳೆಯಬ್ಬರಿಗೆ ಮೂವರು ಮಾಸ್ಕ್ ಧಾರಿಗಳು ಮಚ್ಚು ತೋರಿಸಿ ಚಿನ್ನ ದರೋಡೆ ಮಾಡಿದ್ದಾರೆ.
ನಗರದ ಸೋಮವಾರಪೇಟೆ ಬಡಾವಣೆಯ ನೀಲಮ್ಮ ಚಿನ್ನ ಕಳೆದುಕೊಂಡ ಮಹಿಳೆ. ಕರಿನಂಜನಪುರದಲ್ಲಿನ ತನ್ನ ಅಳಿಯನ ಮನೆಯಿಂದ ಸೋಮವಾರಪೇಟೆ ಮನೆಗೆ ತೆರಳಬೇಕಾದರೇ ಮೂವರು ಮಾಸ್ಕ್ ಧಾರಿಗಳು ಮಚ್ಚು ತೋರಿಸಿ ಸರ, ತಾಳಿ, ಓಲೆ ಹಾಗೂ ಗುಂಡುಗಳನ್ನು ಬಿಚ್ಚಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.