ಚಾಮರಾಜನಗರ: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಬಾಣಳ್ಳಿ ಗೇಟ್ ಸಮೀಪ ಸಂಭವಿಸಿದೆ.
ಚಾಮರಾಜನಗರದ ಬಾಣಳ್ಳಿ ಬಳಿ ಕಾರು-ಬೈಕ್ ಅಪಘಾತ.. ಇಬ್ಬರು ಗಾರೆ ಕೆಲಸಗಾರರು ಸಾವು - ಚಾಮರಾಜನಗರದ ಬಾಣಳ್ಳಿ ಸಮೀಪ ಕಾರು ಬೈಕ್ ಅಪಘಾತ ಇಬ್ಬರು ಗಾರೆ ಕೆಲಸಗಾರರು ಮೃತ
ಚಾಮರಾಜನಗರ ತಾಲೂಕಿನ ಬಾಣಳ್ಳಿ ಗೇಟ್ ಸಮೀಪ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಕಾರು-ಬೈಕ್ ಅಪಘಾತ
ಮೃತರನ್ನು ಮೈಸೂರಿನ ರಾಜು(28) ಹಾಗೂ ಮಂಡ್ಯ ಜಿಲ್ಲೆಯ ಜಯರಾಮು(65) ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಗಾರೆ ಕೆಲಸಗಾರರಾಗಿದ್ದು, ಹಣ ಪಡೆಯುವ ಸಂಬಂಧ ಚಾಮರಾಜನಗರದತ್ತ ಬಂದಿದ್ದರು ಎನ್ನಲಾಗ್ತಿದೆ.
ಮೈಸೂರಿನಿಂದ ಗುಂಬಳ್ಳಿಯತ್ತ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ರಾಜು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆ ಸಾಗಿಸುವಾಗ ಜಯರಾಮು ಅಸುನೀಗಿದ್ದಾರೆ. ಕಾರು, ಬೈಕ್ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಸಂತೇಮರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.