ಕರ್ನಾಟಕ

karnataka

ETV Bharat / state

ಹಥ್ರಾಸ್ ಅತ್ಯಾಚಾರ ಖಂಡಿಸಿದ ಪ್ರಗತಿಪರ ಸಂಘಟನೆಗಳು: ಮೊಂಬತ್ತಿ ಮೆರವಣಿಗೆ ನಡೆಸಿ ಸಂತಾಪ

ಉತ್ತರ ಪ್ರದೇಶದ ಹಥ್ರಾಸ್​​​​​ನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ನಾಲಿಗೆ ಕೊಯ್ದು, ಬೆನ್ನು ಮೂಳೆ ಮುರಿದು ಕೊಲೆ ಮಾಡಿರುವ ಕಾಮುಕರ ಪೈಶಾಚಿಕ ಕೃತ್ಯವನ್ನು ಇಲ್ಲಿನ ವಿವಿಧ ಪ್ರಗತಿಪರ ಸಂಘಟನೆಗಳು ಖಂಡಿಸಿವೆ.

Candle parade
ಪ್ರಗತಿಪರ ಸಂಘಟನೆಗಗಳಿಂದ ಮೊಂಬತ್ತಿ ಮೆರವಣಿಗೆ

By

Published : Oct 3, 2020, 8:52 AM IST

Updated : Oct 3, 2020, 9:20 AM IST

ಕೊಳ್ಳೇಗಾಲ: ಉತ್ತರ‌ ಪ್ರದೇಶ ಹಥ್ರಾಸ್​ನ ಯುವತಿ ಮೇಲಿನ ಪೈಶಾಚಿಕ ಕೃತ್ಯವನ್ನು ವಿವಿಧ ಪ್ರಗತಿಪರ ಸಂಘಟನೆಗಳು ಖಂಡಿಸಿದ್ದು, ಮೊಂಬತ್ತಿ ಮೆರವಣಿಗೆ ಮಾಡುವ ಮೂಲಕ ಮೃತ ಸಂತ್ರಸ್ತೆಗೆ ಸಂತಾಪ ಸೂಚಿಸಿವೆ.

ಹಥ್ರಾಸ್ ಅತ್ಯಾಚಾರ ಖಂಡಿಸಿ ಪ್ರಗತಿಪರ ಸಂಘಟನೆಗಳಿಂದ ಮೊಂಬತ್ತಿ ಮೆರವಣಿಗೆ

ಪಟ್ಟಣದ ಎಂ.ಜಿ.ಎಸ್.ವಿ‌ ಕಾಲೇಜಿನ ಮೈದಾನದಲ್ಲಿ ಸಮಾವೇಶಗೊಂಡ ವಿವಿಧ ಪ್ರಗತಿಪರ ಸಂಘಟನೆಗಳು ಮೊಂಬತ್ತಿ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮಸೀದಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ 5 ನಿಮಿಷ ಕಾಲ ರಸ್ತೆ ತಡೆಯಲಾಯಿತು. ನಂತರ ಡಾ. ಬಿ.ಆರ್.ಅಂಬೇಂಡ್ಕರ್ ವೃತ್ತದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಗೆ ಸಂತಾಪ ಸೂಚಿಸಿ 2 ನಿಮಿಷ ಕಾಲ ಮೌನ ಆಚರಿಸಿದ್ದು, ತಪಿತಸ್ಥರಿಗೆ ತ್ವರಿತವಾಗಿ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಮಹಮ್ಮದ್ ಮತೀನ್ ಮಾತನಾಡಿ, ವಾಲ್ಮೀಕಿ ಸಮಾಜದ ಹೆಣ್ಣುಮಗಳಿಗೆ ಬಹಳ‌ ದೊಡ್ಡ ಅನ್ಯಾಯವಾಗಿದೆ. ಈ ಕೃತ್ಯವನ್ನು ವಿವಿಧ ಪ್ರಗತಿಪರ ಸಂಘಟನೆಗಳು ಖಂಡಿಸುತ್ತವೆ. ಬಿಜೆಪಿ ಸರ್ಕಾರ ಬಂದ 6 ವರ್ಷದ ಅವಧಿಯಲ್ಲಿ‌ 3000ಕ್ಕೂ ಹೆಚ್ಚು ಇಂತಹ ಪ್ರಕರಣಗಳು ನಡೆದಿದೆ. ಕೆಲವೇ ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿದ್ದು, ದೇಶದಲ್ಲಿ ನಿರಂತರ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದೆ. ಕೂಲಿ ಮಾಡುವವರು, ಬಡವರು, ದಲಿತ, ಅಲ್ಪಸಂಖ್ಯಾತ‌ ಹಾಗೂ ಹಿಂದುಳಿದವರು ಮೇಲ್ವರ್ಗದವರು ಎಸಗುವ ಕೃತ್ಯಗಳಿಗೆ ನಿರಂತರ ಬಲಿಯಾಗಯತ್ತಿದ್ದಾರೆ. ಆದ್ರೆ‌, ಬಿಜೆಪಿ ಸರ್ಕಾರ ನೋಡುತ್ತ ಕುಳಿತಿದೆ ಎಂದು ಆರೋಪಿಸಿದರು.

Last Updated : Oct 3, 2020, 9:20 AM IST

ABOUT THE AUTHOR

...view details