ಕರ್ನಾಟಕ

karnataka

ETV Bharat / state

ಘೀಳಿಡುವ ಆನೆ, ಹಾರಾಡುವ ಕಮಲ: ಚುನಾವಣೆ ರಂಗು ಹೆಚ್ಚಿಸಿದ ಬಿಎಸ್​ಪಿ-ಬಿಜೆಪಿ ಪ್ರಚಾರ! - ಬಿಎಸ್​ಪಿ

ಕಾಂಗ್ರೆಸ್ ಇದುವರೆಗೂ ಪ್ರಚಾರ ವಾಹನ ಬಳಸಿಲ್ಲ. ಬಿಜೆಪಿಗೆ ಹೋಲಿಸಿದರೆ ಬಿಎಸ್​ಪಿ ಪ್ರಚಾರ ವಾಹನ ಎಲ್ಲರನ್ನು ಸೆಳೆಯುತ್ತಿದೆ. ಹಿರಿಯರು, ಅನಕ್ಷರಸ್ಥರಿಗೆ ಪಕ್ಷ ಪರಿಚಯಿಸುವ ಹಾಗೂ ಅವರನ್ನು ಪ್ರಚಾರದ ವಾಹನದತ್ತ ಬರುವಂತೆ ಮಾಡುವ ಚಾಣಾಕ್ಷತನ ತೋರಿದೆ.

ಚಾಮರಾಜನಗರ

By

Published : Apr 5, 2019, 4:23 AM IST

ಚಾಮರಾಜನಗರ:ಘೀಳಿಡುವ ಆನೆ ಸ್ತಬ್ಧ ಚಿತ್ರವನ್ನು ಪ್ರಚಾರದಲ್ಲಿ ಬಳಸಿಕೊಳ್ಳುತ್ತಿರುವ ಬಿಎಸ್​ಪಿ ಹಾಗೂ ಮೋದಿ, ಬಿಎಸ್​ವೈ ಕಟೌಟ್​ಗಳನ್ನು ಹಾಕಿ ಸಂಚರಿಸುತ್ತಿರುವ ಬಿಜೆಪಿ ಪ್ರಚಾರ ವಾಹನ ಜಿಲ್ಲೆಯ ಚುನಾವಣೆ ರಂಗನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಚಾರದಲ್ಲಿ ವಿಭಿನ್ನತೆ ಕಂಡುಕೊಂಡಿರುವ ಬಿಎಸ್​ಪಿ ಸ್ತಬ್ಧ ಚಿತ್ರದಲ್ಲಿ ಆನೆ ಘೀಳಿಡುವ ಶಬ್ಧ ಪ್ರತಿ 15 ಸೆಕೆಂಡಿಗೊಮ್ಮೆ ಬರುವ ಮೂಲಕ ಎಲ್ಲರನ್ನು ಆಕರ್ಷಿಸುತ್ತಿದೆ.

ಚಾಮರಾಜನಗರ

ಕಾಂಗ್ರೆಸ್ ಇದುವರೆವಿಗೂ ಪ್ರಚಾರ ವಾಹನವನ್ನು ಬಳಸಿಲ್ಲ. ಬಿಜೆಪಿಗೆ ಹೋಲಿಸಿದರೆ ಬಿಎಸ್​ಪಿ ಪ್ರಚಾರ ವಾಹನ ಎಲ್ಲರನ್ನು ಸೆಳೆಯುತ್ತಿದ್ದು ಹಿರಿಯರು, ಅನಕ್ಷರಸ್ಥರಿಗೂ ಪಕ್ಷವನ್ನು ಪರಿಚಯಿಸುವ, ಪ್ರಚಾರದ ವಾಹನದತ್ತ ಬರುವಂತೆ ಮಾಡುವ ಚಾಣಾಕ್ಷತನ ಎಲ್ಲರೂ ಮೆಚ್ಚುವಂತದ್ದು.

ಉಳಿದಂತೆ ಬಿಜೆಪಿ ಕಮಲದ ಬಾವುಟಗಳು, ಮೋದಿ-ಶಾ, ಬಿಎಸ್​ವೈ ಕಟೌಟ್​ಗಳನ್ನು ವಾಹನಕ್ಕೇರಿಸಿ ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಪ್ರಯತ್ನ ಮಾಡಿದೆ.

ಚಾಮರಾಜನಗರ

ಒಟ್ಟಿನಲ್ಲಿ ಪ್ರಚಾರದ ವಾಹನಗಳ ಅಬ್ಬರ ಚುನಾವಣಾ ಕಣವನ್ನು ಮತ್ತಷ್ಟು ಬಿರುಸುಗೊಳಿಸುತ್ತಿದ್ದು ಕಾರ್ಯಕರ್ತರ ಉತ್ಸಾಹಕ್ಕೆ ಪೂರಕವಾಗಿದೆ.

ABOUT THE AUTHOR

...view details