ಕರ್ನಾಟಕ

karnataka

ETV Bharat / state

ಬೈಕ್​ಗೆ ಪಿಕ್ ಅಪ್ ವಾಹನ ಡಿಕ್ಕಿ : ಇಬ್ಬರು ಎಎಸ್ಐಗಳಿಗೆ ಗಂಭೀರ ಗಾಯ - ಬೈಕ್​ಗೆ ಪಿಕಪ್​ ವಾಹನ ಡಿಕ್ಕಿ

ಬೈಕ್​​ಗೆ ಪಿಕಪ್​​ ವಾಹನ ಡಿಕ್ಕಿ ಹೊಡೆದು ಇಬ್ಬರು ಎಎಸ್​ಐಗಳು ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

bike-pickup-accident-two-asi-seriously-injured-at-chamarajanagar
ಬೈಕ್ ಗೆ ಪಿಕ್ ಅಪ್ ವಾಹನ ಡಿಕ್ಕಿ : ಇಬ್ಬರು ಎಎಸ್ಐಗಳಿಗೆ ಗಂಭೀರ ಗಾಯ

By

Published : Nov 6, 2022, 10:19 PM IST

ಚಾಮರಾಜನಗರ : ಬೈಕ್​ಗೆ ಪಿಕಪ್​ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಎಎಸ್‌ಐಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ‌ ಉಡಿಗಾಲ ಸಮೀಪ ನಡೆದಿದೆ. ಗಾಯಗೊಂಡವರನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್​​ಐ ಮಲ್ಲಿಕಾರ್ಜುನ ಹಾಗೂ ತೆರಕಣಾಂಬಿ ಪೊಲೀಸ್ ಠಾಣೆಯ ಎಎಸ್​​ಐ ಮಹದೇವಸ್ವಾಮಿ ಎಂದು ಗುರುತಿಸಲಾಗಿದೆ.

ಬೈಕ್ ಗೆ ಪಿಕ್ ಅಪ್ ವಾಹನ ಡಿಕ್ಕಿ : ಇಬ್ಬರು ಎಎಸ್ಐಗಳಿಗೆ ಗಂಭೀರ ಗಾಯ

ಬಾಳೆಕಾಯಿ ತುಂಬಿಕೊಂಡು ಹೋಗುತ್ತಿದ್ದ ಪಿಕ್ ಅಪ್ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ. ಗಾಯಗೊಂಡ ಎಎಸ್ಐಗಳನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಕಲಬುರಗಿ: ಸದ್ಯದಲ್ಲೇ ಹಸೆಮಣೆ ಏರಬೇಕಿದ್ದ ಸರ್ಕಾರಿ ನೌಕರ ಆತ್ಮಹತ್ಯೆ

ABOUT THE AUTHOR

...view details