ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಸಡಿಲಿಕೆ: ಕೊಳ್ಳೇಗಾಲದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣ

ಇಷ್ಟು ದಿನ ಲಾಕ್​​​​ಡೌನ್​ ಕಾರಣ ಮನೆಯಲ್ಲಿದ್ದ ಜನರು ಇದೀಗ ವಾಹನದೊಂದಿಗೆ ರಸ್ತೆಗೆ ಇಳಿದಿದ್ದಾರೆ. ಲಾಕ್​ಡೌನ್​ ಸಡಿಲಿಕೆಯಾಗುತ್ತಿದ್ದಂತೆ ಅಪಘಾತ ಕೂಡಾ ಹೆಚ್ಚಾಗಿದ್ದು ಕೊಳ್ಳೇಗಾಲದಲ್ಲಿ ಬೈಕ್ ಸವಾರನೊಬ್ಬ ಆಯ ತಪ್ಪಿ ಸೇತುವೆ ತಡೆಗೋಡೆಗೆ ಗುದ್ದಿದ್ದರಿಂದ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

bike accident
ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಯುವಕ

By

Published : May 17, 2020, 6:37 PM IST

ಕೊಳ್ಳೇಗಾಲ (ಚಾಮರಾಜನಗರ):ಲಾಕ್​ಡೌನ್ ಸಡಿಲಿಕೆಯಾದ ಬೆನ್ನಲ್ಲೇ ವಾಹನಗಳು ರಸ್ತೆಗಿಳಿದಿವೆ. ಇದರಿಂದ ಪಟ್ಟಣದ ಸುತ್ತ ಮುತ್ತ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ತಡರಾತ್ರಿ ಬೈಕ್​​ವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಿರುಸೇತುವೆಯ ತಡೆಗೋಡೆಗೆ ಗುದ್ದಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಪಟ್ಟಣದ ಭೀಮನಗರ ನಿವಾಸಿ ನಿಖಿಲ್ (23) ಮೃತ ಯುವಕ. ಈತ ಕರ್ತವ್ಯಕ್ಕೆ ಹಾಜರಾಗಲು ಸಂತೆಮರಳ್ಳಿ ಕುದೇರ್ ಹಾಲಿನ ಡೈರಿಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವೇಗವಾಗಿ ಬೈಕ್ ಚಲಾಯಿಸಿದ ಪರಿಣಾಮ ಆಯ ತಪ್ಪಿ ರಸ್ತೆ ಬದಿಯ ಕಿರುಸೇತುವೆಯ ತಡೆಗೋಡೆಗೆ ಗುದ್ದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಈ ಸಂಬಂಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದಲ್ಲಿ ಲಾಕ್​ಡೌನ್​ ಸಡಿಲಿಕೆ ಮಾಡಿರುವುದರಿಂದ ಯುವಕರು ವೇಗವಾಗಿ ಬೈಕ್​ ಚಾಲನೆ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಲಾಕ್​​ಡೌನ್​​​​​​ ಸಡಿಲವಾದ ದಿನದಿಂದ ಇದುವರೆಗೂ 4-5 ಅಪಘಾತ ಪ್ರಕರಣಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.

ABOUT THE AUTHOR

...view details