ಕರ್ನಾಟಕ

karnataka

ETV Bharat / state

ನಾಳೆ ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಆಗಮನ: ಕಾಂಗ್ರೆಸ್​ ನಾಯಕರ ಫ್ಲೆಕ್ಸ್ ಹರಿದ ಕಿಡಿಗೇಡಿಗಳು - ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ನಾಳೆ ಗುಂಡ್ಲುಪೇಟೆಗೆ ಭಾರತ್ ಜೋಡೋ ಯಾತ್ರೆ ಆಗಮಿಸಲಿದೆ. ಈ ಹಿನ್ನೆಲೆ ಗುಂಡ್ಲುಪೇಟೆ ಪಟ್ಟಣದಲ್ಲಿ ಸುರಭಿ‌ ಹೋಟೆಲ್‌ನಿಂದ ಊಟಿ ರಸ್ತೆಯುದ್ದಕ್ಕೂ ಫ್ಲೆಕ್ಸ್​ ಅಳವಡಿಸಲಾಗಿದ್ದು, ಯಾರೋ ಕಿಡಿಗೇಡಿಗಳು ಫ್ಲೆಕ್ಸ್ ಗಳನ್ನು ಹರಿದುಹಾಕಿದ್ದಾರೆ.

bharat jodo yatra
ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು

By

Published : Sep 29, 2022, 10:20 AM IST

ಚಾಮರಾಜನಗರ: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ‌ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಮ್ಮಿಕೊಂಡಿರುವ ಭಾರತ್ ಜೋಡೋ‌ ಯಾತ್ರೆ ಸೆ.30 ರಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಪಕ್ಷದ ವತಿಯಿಂದ ಹಾಕಲಾಗಿದ್ದ ನಾಯಕರ ಫ್ಲೆಕ್ಸ್​ಗಳನ್ನು ಇಂದು ಬೆಳಗಿನಜಾವ ದುಷ್ಕರ್ಮಿಗಳು ಹರಿದುಹಾಕಿದ್ದಾರೆ.

ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು

ಗುಂಡ್ಲುಪೇಟೆ ಪಟ್ಟಣದಲ್ಲಿ ಸುರಭಿ‌ ಹೋಟೆಲ್‌ನಿಂದ ಊಟಿ ರಸ್ತೆಯ ಉದ್ದಕ್ಕೂ ಅಳವಡಿಸಿದ್ದ ಫ್ಲೆಕ್ಸ್​ಗಳಿಗೆ ಕಿಡಿಗೇಡಿಗಳು ಬ್ಲೇಡ್ ಹೊಡೆದಿದ್ದಾರೆ‌. ಎಐಸಿಸಿ‌ ನಾಯಕ ರಾಹುಲ್‌ ಗಾಂಧಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಚಾಮರಾಜನಗರ ಶಾಸಕ ಸಿ ಪುಟ್ಟರಂಗಶೆಟ್ಟಿ ಭಾವಚಿತ್ರಗಳಿರುವ ಫ್ಲೆಕ್ಸ್ ಅನ್ನು ಹರಿದು ಹಾಕಲಾಗಿದೆ.

ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ ವಿಸಿಟ್ ನಡುವೆ ಚಿಣ್ಣರೊಟ್ಟಿಗೆ ವಾಲಿಬಾಲ್ ಆಡಿದ ಡಿಕೆಶಿ..

ಕಾಂಗ್ರೆಸ್ ಮುಖಂಡರು ಬಿಜೆಪಿಯವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ರೆ, ತಾವು ಈ ರೀತಿಯ ಹೀನ, ಹೇಡಿ ಕೆಲಸ ಮಾಡಲ್ಲ ಎಂದು ಬಿಜೆಪಿಗರು ಕಿಡಿಕಾರಿದ್ದಾರೆ.

ABOUT THE AUTHOR

...view details