ಕರ್ನಾಟಕ

karnataka

ETV Bharat / state

ಗುಡ್​ನ್ಯೂಸ್: ಭರಚುಕ್ಕಿ, ಹೊಗೆನಕಲ್ ಜಲಪಾತ ಪ್ರವಾಸಿಗರಿಗೆ ಮುಕ್ತ - ಜಲಪಾತ ನಿರ್ಬಂಧ ಆದೇಶ ಹಿಂಪಡೆದ ಡಿಸಿ

ಭರಚುಕ್ಕಿ ಮತ್ತು ಹೊಗೆನಕಲ್ ಜಲಪಾತ ಪ್ರವಾಸಿಗರಿಗೆ ಮುಕ್ತ- ನಿರ್ಬಂಧ ಆದೇಶ ಹಿಂಪಡೆದ ಡಿಸಿ ಚಾರುಲತಾ ಸೋಮಲ್

barachukki
ಹೊಗೆನಕಲ್ ಜಲಪಾತ

By

Published : Jul 23, 2022, 12:45 PM IST

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ, ವೆಸ್ಲಿ ಸೇತುವೆ ಹಾಗು ಹನೂರು ತಾಲೂಕಿನ ಹೊಗೆನಕಲ್ ಜಲಪಾತಗಳಿಗೆ ವಿಧಿಸಿದ್ದ ಪ್ರವಾಸಿಗರ ಪ್ರವೇಶ ನಿರ್ಬಂಧ ಆದೇಶವನ್ನು ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ಹಿಂಪಡೆದಿದ್ದಾರೆ.

ಕೇರಳದ ವೈನಾಡು ಮತ್ತು ಕಾವೇರಿ ಸೀಮೆಯಲ್ಲಿ ಹೆಚ್ಚಿನ ಮಳೆ ಪರಿಣಾಮ ಭರಚುಕ್ಕಿ ಜಲಪಾತ ಹಾಗು ಹೊಗೆನಕಲ್ ಜಲಪಾತ ಅಪಾಯಕಾರಿಯಾಗಿ ಭೋರ್ಗರೆಯುತ್ತಿದ್ದ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿತ್ತು. ಈಗ ಮಳೆ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಕಾವೇರಿ ಹಾಗೂ ಕಬಿನಿ ನದಿಗಳಲ್ಲಿ ನೀರಿನ ಹರಿವು ಇಳಿದಿದೆ. ಹೀಗಾಗಿ, ಪ್ರವಾಸಿಗರಿಗೆ ವಿಧಿಸಿದ್ದ ನಿರ್ಬಂಧವನ್ನು ಜಿಲ್ಲಾಧಿಕಾರಿ ವಾಪಸ್ ಪಡೆದಿದ್ದಾರೆ.

ವಾರಾಂತ್ಯದಲ್ಲಿ ಭರಚುಕ್ಕಿ ಜಲಪಾತಕ್ಕೆ ಜನಸಾಗರವೇ ಹರಿದು ಬರುತ್ತಿತ್ತು. ನಿರ್ಬಂಧ ಹೇರಿದ ಬಳಿಕ ನೂರಾರು ಮಂದಿ ನಿರಾಸೆ ಮೊಗ ಹೊತ್ತು ಹಿಂತಿರುಗುತ್ತಿದ್ದರು. ಇದೀಗ ನಿರ್ಬಂಧ ತೆರವಾದ ಹಿನ್ನೆಲೆಯಲ್ಲಿ ಮತ್ತೆ ಪ್ರವಾಸಿತಾಣಗಳು ಗಿಜಿಗುಡಲಿವೆ.

ಇದನ್ನೂ ಓದಿ:ಮೈದುಂಬಿ ಹರಿಯುತ್ತಿರುವ ಜೋಗ ಜಲಪಾತ: ವೀಕ್ಷಣೆಗೆ ಪ್ರವಾಸಿಗರ ದಂಡು

ABOUT THE AUTHOR

...view details