ಚಾಮರಾಜನಗರ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಸುತ್ತಿರುವ ಪರಿಸರ ಪ್ರವಾಸೋದ್ಯಮ ಸಫಾರಿ ಚಟುವಟಿಕೆಗಳನ್ನು ಗೋಪಾಲಸ್ವಾಮಿ ಬೆಟ್ಟ ವಲಯದ ಮೇಲುಕಾಮನ ಹಳ್ಳಿಯ ರಾಷ್ಟ್ರೀಯ ಹೆದ್ದಾರಿ 181ರ ಪಕ್ಕದ ವಿಶೇಷ ಹುಲಿ ಸಂರಕ್ಷಣಾದಳದ ಕ್ಯಾಂಪಸ್ಗೆ ಜೂ.2 ರಿಂದ ಸ್ಥಳಾಂತರವಾಗಲಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳನ್ವಯ ಸಫಾರಿ ಸೇವಾ ಸ್ಥಳವನ್ನು ಬದಲಿಸಲಾಗಿದೆ ಎಂದು ಸಿಎಫ್ಒ ಬಾಲಚಂದ್ರ ಪ್ರಕಟಣೆ ಹೊರಡಿಸಿದ್ದಾರೆ.
ಸಿಎಫ್ಒ ಬಾಲಚಂದ್ರ ಹೊರಡಿಸಿರುವ ಪ್ರಕಟಣೆ ಪ್ರಕಟಣೆ ಕುರಿತು ಈಟಿವಿ ಭಾರತದೊಂದಿದೆ ಸಿಎಫ್ಒ ಬಾಲಚಂದ್ರ ಮಾತನಾಡಿ, ಬಂಡೀಪುರ ಕ್ಯಾಂಪಸ್ನಲ್ಲಿ ಶಿಸ್ತು ತರಲು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಬಂಡೀಪುರ ಕ್ಯಾಂಪಸ್ನಲ್ಲಿ ಸಫಾರಿಗೆ ಹೋಗುವವರಿಗಿಂತ ಹೆಚ್ಚಾಗಿ ಅಡ್ಡಾಡುವರು ಹೆಚ್ಚಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬಂಡೀಪುರ ಸಫಾರಿ ಝೋನಿಗೆ ಹೋಗಿಬರಲು ಅರ್ಧ ತಾಸು ಬೇಕಾಗುವುದರಿಂದ 3 ರ ಬದಲಾಗಿ 2.30 ಕ್ಕೆ ಸಫಾರಿ ಆರಂಭಿಸುವ ಚಿಂತನೆ ನಡೆದಿದೆ ಶೀಘ್ರವೇ ಈಗಿನ ವೇಳಾಪಟ್ಟಿಯನ್ನು ಬದಲಿಸುವುದಾಗಿ ಅವರು ಮಾಹಿತಿ ನೀಡಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಬಂಡೀಪುರ ಕ್ಯಾಂಪಸ್ನಲ್ಲಿ ಸದಾ ಗಿಜಿಗುಡುತ್ತಿದ್ದ ಜನಜಂಗುಲಿ ಇಲ್ಲದಾಗುವುದರಿಂದ ಪ್ರಾಣಿಗಳ ದರ್ಶನ ಮತ್ತಷ್ಟು ಹೆಚ್ಚಾಗಲಿದೆ.