ದವಸ-ಧಾನ್ಯದಂತೆ ಚೀಲದಲ್ಲಿ 8 ಲಕ್ಷ ಮೌಲ್ಯದ ಗಾಂಜಾ ಹೊತ್ತು ಬಂದ ; ಹನೂರಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ!
ದವಸ-ಧಾನ್ಯದಂತೆ ಚೀಲದಲ್ಲಿ ಗಾಂಜಾ ಹೊತ್ತು ಬರುತ್ತಿದ್ದ ಕುರಿತು ಖಚಿತ ಮಾಹಿತಿ ಪಡೆದ ರಾಮಾಪುರ ಪೊಲೀಸರು ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ..
ಚೀಲದಲ್ಲಿ 8 ಲಕ್ಷ ಮೌಲ್ಯದ ಗಾಂಜಾ
ಚಾಮರಾಜನಗರ: ಬರೋಬ್ಬರಿ 8 ಲಕ್ಷ ರೂ. ಮೌಲ್ಯದ 10.8 ಕೆಜಿ ಒಣ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ಮದುರೆವೀರನ ದೇಗುಲ ಸಮೀಪ ನಡೆದಿದೆ.