ಚಾಮರಾಜನಗರ : ಧ್ರುವನಾರಾಯಣ ವಿರುದ್ಧ 1 ಮತದ ಅಂತರದಿಂದ ಸೋತ ಬಳಿಕ ನಿರಂತರವಾಗಿ ಸೋಲು ಅನುಭವಿಸಿದ್ದ ಎ ಆರ್ ಕೃಷ್ಣಮೂರ್ತಿಗೆ ಕೊಳ್ಳೇಗಾಲದ ಮತದಾರರು ಭರ್ಜರಿ ಗೆಲುವನ್ನೇ ಕೊಟ್ಟಿದ್ದಾರೆ.
ಹೌದು.. ಹಾಲಿ ಬಿಜೆಪಿ ಶಾಸಕ ಎನ್ ಮಹೇಶ್ ವಿರುದ್ಧ ಎ ಆರ್ ಕೃಷ್ಣಮೂರ್ತಿ ಬರೋಬ್ಬರಿ 59,519 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ನಿರಂತರ ಸೋಲಿಗೆ ಫುಲ್ ಸ್ಟಾಪ್ ಇಟ್ಟು ರಾಜಕೀಯದಲ್ಲಿ ಮತ್ತೆ ಮೇಲೆದ್ದಿದ್ದಾರೆ. ನಿರಂತರ ಸೋಲಿನಿಂದ ಕಂಗೆಟ್ಟಿದ್ದ ಎಆರ್ಕೆಗೆ ಈ ಗೆಲುವು ಹೊಸತನವನ್ನು ಕೊಟ್ಟಿದ್ದು, 1 ಮತದ ಸೋಲನ್ನು ಈ ಭರ್ಜರಿ ಗೆಲುವು ಮರೆಸಿದೆ.
2004ರಲ್ಲೂ ಧ್ರುವನಾರಾಯಣ್ ವಿರುದ್ಧ ಸಂತೆಮಾರನಹಳ್ಳಿ ಕ್ಷೇತ್ರದಿಂದ ಒಂದೇ ಮತದ ಅಂತರದಲ್ಲಿ ಎ ಆರ್ ಕೃಷ್ಣಮೂರ್ತಿ ಸೋತಿದ್ದರು.
ಇದನ್ನೂ ಓದಿ:ಮಲ್ಲೇಶ್ವರದಿಂದ ಡಾ ಸಿ ಎನ್ ಅಶ್ವತ್ಥನಾರಾಯಣ್ ಆಯ್ಕೆ: ಕಾರ್ಯಕರ್ತರ ಸಂಭ್ರಮ
ಮಹೇಶ್ಗೆ ಹೀನಾಯ ಸೋಲು : ಜಿಲ್ಲೆಯಲ್ಲಿ ಅಧಿಕ ಮತಗಳ ಅಂತರದಿಂದ ಸೋಲುಂಡ ಶಾಸಕರಾಗಿ ಮಹೇಶ್ ಇದ್ದು ಭರ್ತಿ 59 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ್ದಾರೆ. ಬಿಎಸ್ಪಿ ಇಂದ ಬಿಜೆಪಿಗೆ ತೆರಳಿದ ಬಳಿಕ ತಾಲೂಕಿನಲ್ಲಿ ಉಂಟಾದ ವಿರೋಧ ಮತಪೆಟ್ಟಿಗೆಯಲ್ಲಿ ತೋರಿದೆ.
ಇದನ್ನೂ ಓದಿ:ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು; ಕೆ ಸುಧಾಕರ್ ವಿರುದ್ಧ ಗೆದ್ದು ಬೀಗಿದ ಪ್ರದೀಶ್ ಈಶ್ವರ್
ಎ ಆರ್ ಕೃಷ್ಣಮೂರ್ತಿಗೆ ಅನುಕಂಪ, ಬಿಎಸ್ಪಿ ಬೆಂಬಲ, ಕಾಂಗ್ರೆಸ್ ಗೆ ಹಲವರ ಸೇರ್ಪಡೆ ಕೈ ಗೆಲುವಿಗೆ ಸಹಕಾರವಾಗಿದ್ದು, ಮಹೇಶ್ ಅವರಿಗೆ ವ್ಯಾಪಕ ಆಡಳಿತ ವಿರೋಧಿ ನೀತಿ ಮತಪೆಟ್ಟಿಗೆಯಲ್ಲಿ ಕೆಲಸ ಮಾಡಿದೆ.