ಚಾಮರಾಜನಗರ: ಕಳೆದ ಎಂಟು ತಿಂಗಳಿನಿಂದ ಫಲಾನುಭವಿಗೆ ಶೌಚಾಲಯದ ಬಿಲ್ ನೀಡಲು ನಗರಸಭೆ ಸತಾಯಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ
20ನೇ ವಾರ್ಡ್ನ ನಾಗನಾಯ್ಕ ವಿಕಲಚೇತನ ದಂಪತಿ ಶೌಚಾಲಯ ಕಟ್ಟಿಸಿಕೊಂಡಿದ್ದು, ಎರಡನೇ ಬಿಲ್ ಕೊಡಲು 8 ತಿಂಗಳಿನಿಂದ ನಗರಸಭೆಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ನಗರಸಭೆ ಆಯುಕ್ತ ರಾಜಣ್ಣ ಗಮನಕ್ಕೆ ತಂದರು ಯಾವುದೇ ಉಪಯೋಗವಿಲ್ಲ. ಕೇಳಿದಾಗೆಲ್ಲ ನಾಳೆ, ನಾಡಿದ್ದು ಎಂದು ಸತಾಯಿಸುತ್ತಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.