ಚಾಮರಾಜನಗರ:ತ್ರಿಬಲ್ ರೈಡಿಂಗ್ನಲ್ಲಿ ತೆರಳುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಅರಕಲವಾಡಿ ಸಮೀಪ ನಡೆದಿದೆ.
ತಮಿಳುನಾಡು ಮೂಲದ ಕುಮಾರ್ (45), ಅರಕಲವಾಡಿ ಸಮೀಪ ಗ್ರಾಮದ ಬಸವಯ್ಯ (65) ಮೃತರು. ಮಹದೇವಯ್ಯ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.