ಚಾಮರಾಜನಗರ: ಬೈಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಂಡೀಪುರ ಗಡಿ ತೆಕ್ಕನಹಳ್ಳ ಬಳಿ ನಡೆದಿದೆ.
ವೀಕೆಂಡ್ ಊಟಿ ಟ್ರಿಪ್ ಕನಸು ಈಡೇರಲಿಲ್ಲ: ಬಸ್ ಡಿಕ್ಕಿಯಾಗಿ ಇಬ್ಬರು ಯುವಕರ ಸಾವು - accident
ಮಧುಮಲೈ ಅರಣ್ಯ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಗೂಡಲೂರಿನ ಸಾರ್ವಜನಿಕ ಆಸ್ಪತ್ರೆಗೆ ಮೃತರ ಶವಗಳನ್ನು ರವಾನಿಸಲಾಗಿದೆ.
accident
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ಸೋಮು, ಪಂಜರಹಳ್ಳಯ ಗೋಕುಲ್ ಮೃತಪಟ್ಟ ದುರ್ದೈವಿಗಳು.
ಭಾನುವಾರದ ರಜಾದಿನವನ್ನು ಊಟಿಯಲ್ಲಿ ಕಳೆಯಬೇಕೆಂದು ಬೈಕ್‌ನಲ್ಲಿ ಜಾಲಿ ರೈಡ್ ಹೊರಟಿದ್ದಾಗ ಕೆಎಸ್ಆರ್ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಬೈಕ್‌ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.