ಕೊಳ್ಳೇಗಾಲ:ಸ್ನೇಹಿತರ ನೋಡಿ ಬರುವುದಾಗಿ ಹೊರಟ ಬಾಲಕನೋರ್ವ ನಾಪತ್ತೆಯಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ನೇಹಿತರ ನೋಡಿ ಬರುವುದಾಗಿ ಹೋದ ಬಾಲಕ ನಾಪತ್ತೆ - A boy missing
ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಮನೆಯವರು ಅಕ್ಕಪಕ್ಕದ ಮನೆ ಹಾಗೂ ಸ್ನೇಹಿತರ ಮನೆ ಕಡೆ ಹುಡುಕಾಡಿದ್ದು, ಬಾಲಕ ಮಾತ್ರ ಪತ್ತೆಯಾಗಿಲ್ಲ. ಈ ಸಂಬಂಧ ನಾಪತ್ತೆಯಾಗಿರುವ ಸ್ವಾಮಿ ತಂದೆ ನಂಜುಂಡಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಲೂಕಿನ ಸಿಂಗನಲ್ಲೂರು ಗ್ರಾಮದ ನಿವಾಸಿ ನಂಜುಂಡಸ್ವಾಮಿ ಎಂಬುವರ ಮಗ ಸ್ವಾಮಿ( 15) ನಾಪತ್ತೆಯಾಗಿರುವ ಬಾಲಕ. ಈತ ಕಾಮಗಾರೆ ಗ್ರಾಮದ ಸಂತ ಕ್ಷೇವಿಯರ್ ಶಾಲೆಯಲ್ಲಿ 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು, ಎಂದಿನಂತೆ ಏ. 16ರಂದು ಶಾಲೆ ಮುಗಿಸಿ ಮನೆಗೆ ಬಂದಿದ್ದಾನೆ. ಬಳಿಕ ತನ್ನ ಸ್ನೇಹಿತರನ್ನು ನೋಡಿ ಬರುವುದಾಗಿ ತೆರಳಿದ್ದ.
ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಮನೆಯವರು ಅಕ್ಕಪಕ್ಕದ ಮನೆ ಹಾಗೂ ಸ್ನೇಹಿತರ ಮನೆ ಕಡೆ ಹುಡುಕಾಡಿದ್ದು, ಬಾಲಕ ಮಾತ್ರ ಪತ್ತೆಯಾಗಿಲ್ಲ. ಈ ಸಂಬಂಧ ನಾಪತ್ತೆಯಾಗಿರುವ ಸ್ವಾಮಿ ತಂದೆ ನಂಜುಂಡಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ.